ಬೆಂಗಳೂರು[ಜು.20]: ‘ಯಾರು ಹೇಗೆ ಬೆಳೆದು ಬಂದಿರುತ್ತಾರೋ, ಬೆಳೆಯುವ ಹಾದಿ, ನಡತೆ ಹಾಗೂ ಸ್ವಭಾವ ಹೇಗಿರುತ್ತದೆಯೋ ಅದಕ್ಕೆ ಅನುಗುಣವಾಗಿ ಮಾತನಾಡುತ್ತಾರೆ. ನಾನು ಅವರನ್ನು ಮಹಿಳೆ ಎಂಬ ಕಾರಣಕ್ಕೆ ಗೌರವಿಸುತ್ತೇನೆ.’ ತಮ್ಮನ್ನು ಕಾಂಗ್ರೆಸ್ ಏಜೆಂಟ್ ಎಂದು ಆರೋಪಿಸಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ವಿಧಾನಸಭೆ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ನೀಡಿದ ತಿರುಗೇಟು ಇದು.

ಸರ್ಕಾರದ ಏಜೆಂಟ್ ರೀತಿ ಸ್ಪೀಕರ್ ವರ್ತನೆ: ಶೋಭಾ

ಬೆಂಗಳೂರಿನಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ರಮೇಶ್ ಕುಮಾರ್, ಅವರ ವರು ಬೆಳೆದು ಬಂದ ಹಾದಿ, ಸ್ವಭಾವದಂತೆ ಮಾತನಾಡುತ್ತಾರೆ. ನಾನು ಅವರಿಂದ ಕಲಿಯಬೇಕಿರುವುದು ಏನೂ ಇಲ್ಲ. ನನಗೆ ಮಾರ್ಗದರ್ಶನ ಮಾಡುವ ಹಿರಿಯರು ಬೇರೆ ಇದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರಲು ಎಲ್ಲರಿಗೂ ಅವಕಾಶ ಇದೆ. ಆದರೆ, ನನಗೆ ಹಾಗೂ ಅವರಿಗೆ ಹೊರಗಡೆ ಜನರಿದ್ದಾರೆ ಎಂಬ ಭಯವಾದರೂ ಇರಬೇಕು. ಆ ಭಯ ಇಲ್ಲ ಎಂದರೆ ಏನೂ ಮಾಡಲು ಆಗುವುದಿಲ್ಲ ಎಂದರು

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ