Asianet Suvarna News Asianet Suvarna News

ರಾಜೀನಾಮೆ ಕೊಟ್ಟ ಇಬ್ಬರು ಅತೃಪ್ತ ಶಾಸಕರ ರಾಜಕೀಯ ಭವಿಷ್ಯ ಖತಂ?

ಏನಾಗುತ್ತೆ ರೆಬೆಲ್ ಶಾಸಕರ ಭವಿಷ್ಯ..?| ರೆಬೆಲ್ಸ್‌ಗೆ ಎದುರಾಗಿದೆಯಾ ಅನರ್ಹತೆ ಶಾಕ್..?| ರೆಬೆಲ್ಸ್ ರಾಜೀನಾಮೆ ಅಂಗೀಕಾರವಾಗುತ್ತಾ..?| ರೆಬೆಲ್ಸ್ ಶಾಸಕರ ಭವಿಷ್ಯ ಸ್ಪೀಕರ್ ಕೈಯಲ್ಲಿ| ಸರ್ಕಾರ ಉಳಿಸಿಕೊಳ್ಳಲು ದೋಸ್ತಿ ಕಸರತ್ತು| ಹಳೆಯ ಕೇಸ್ ರೀ ಓಪನ್ ಮಾಡಲು ಕಾಂಗ್ರೆಸ್ ಚಿಂತನೆ| ಸ್ಪೀಕರ್ ಎದುರು ರೆಬೆಲ್ಸ್ ಶಾಸಕರ ಪರೇಡ್| 6 ಗಂಟೆಯ ಕುತೂಹಲಕ್ಕೆ ಕಾದು ಕುಳಿತ ರಾಜ್ಯ| ವಿಧಾನಸೌಧಕ್ಕೆ ಪೊಲೀಸ್ ಸರ್ಪಗಾವಲು

Karnataka Political Crisis Ramesh Jarkiholi and Mahesh Kumathalli Political Career May End Soon
Author
Bangalore, First Published Jul 11, 2019, 4:04 PM IST
  • Facebook
  • Twitter
  • Whatsapp

ಬೆಂಗಳೂರು[ಜು.11]: ರಾಜ್ಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಗಳಾಗುತ್ತಿವೆ. ರಾಜೀನಾಮೆ ನೀಡಿದ ಅತೃಪ್ತ ಶಾಸಕರನ್ನು ಓಲೈಸಲು ದೋಸ್ತಿ ನಾಯಕರು ಎಲ್ಲಾ ರೀರತಿಯ ಪ್ರಯತ್ನ ನಡೆಸಿದ್ದರು. ಹೀಗಿದ್ದರೂ ಮುಂಬೈ ಸೇರಿದ್ದ ಶಾಸಕರು ಹಠ ಮುಂದುವರೆಸಿದ್ದರು. ಹೀಗಾಗಿ ಶಾಸಕರ ವಿರುದ್ಧ ಕೊನೆಯ ಅಸ್ತ್ರವೆಂಬಂತೆ ಕಾಂಗ್ರೆಸ್ ಅನರ್ಹತೆಯ ಅಸ್ತ್ರ ಪ್ರಯೋಗಿಸಿತ್ತು. ಇದೀಗ ಈ ಅಸ್ತ್ರದಿಂದ ಇಬ್ಬರು ಕೈ ನಾಯಕರ ರಾಜಕೀಯ ಭವಿಷ್ಯ ಕೊನೆಯಾಗುವ ಸಾಧ್ಯತೆಗಳು ಗರಿಗೆದರಿವೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೌದು ಕಳೆದೆರಡು ದಿನಗಳ ಹಿಂದೆ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ ನಾಯಕರಿಗೆ ಮರಳಿ ಬನ್ನಿ, ಇಲ್ಲವಾದಲ್ಲಿ ಅನರ್ಹತೆಯ ಅಸ್ತ್ರ ಪ್ರಯೋಗಿಸಬೇಕಾಗುತ್ತದೆ ಎಂದು ಗುಡುಗಿದ್ದರು. ಇಷ್ಟಾದರೂ ಯಾವ ನಾಯಕರೂ ಮರಳುವ ಯೋಚನೆ ಮಾಡಿರಲಿಲ್ಲ. ಆದರೀಗ ಸ್ಪೀಕರ್ ಗೆ ಸಲ್ಲಿಸಿರುವ ದೂರಿನ ಮೇರೆಗೆ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಅನರ್ಹರಾಗುವ ಭೀತಿಯಲ್ಲಿದ್ದಾರೆ.

ಇಬ್ಬರು ಶಾಸಕರು ಅನರ್ಹರೆಂದು ಇಂದು ಸಂಜೆ ಆದೇಶ ಹೊರಬೀಳುವ ಸಾಧ್ಯತೆಗಳಿವೆ. ಹೀಗೆ ಆಗಿದ್ದೇ ಆದಲ್ಲಿ ಇದು ಈ ಇಬ್ಬರು ನಾಯಕರ ರಾಜಕೀಯ ಭವಿಷ್ಯವನ್ನು ಕೊನೆಗಾಣಿಸುವ ಸಾಧ್ಯತೆಗಳಿವೆ. 

Follow Us:
Download App:
  • android
  • ios