ಬೆಂಗಳೂರು[ಜು. 10] ಅತೃಪ್ತ ಶಾಸಕರನ್ನು ಕರೆದುಕೊಂಡು ಬರಲು ಹೋಗಿರುವ ಡಿಕೆ ಶಿವಕುಮಾರ್ ಅವರನ್ನು  ಮುಂಬೈ ಪೊಲೀಸರು ಬಂಧಿಸಿದ್ದಾರೆ.  ಇತ್ತ ರಾಜ್ಯದಲ್ಲಿ ಪೊಲಿಟಿಕಲ್ ಹೈಡ್ರಾಮಾ ಮುಂದುವರಿದಿದೆ. 

ರಾಜೀನಾಮೆ ಸಲ್ಲಿಸಿದವರ ಹೋಲ್ ಸೇಲ್ ಪಟ್ಟಿ

ಬುಧವಾರದ ರಾಜೀನಾಮೆ ಪಟ್ಟಿ

1. ಡಾ. ಕೆ.ಸುಧಾಕರ- ಚಿಕ್ಕಬಳ್ಳಾಪುರ [ಕಾಂಗ್ರೆಸ್]

2 . ಎಂಟಿಬಿ ನಾಗರಾಜ್- ಹೊಸಕೋಟೆ[ಕಾಂಗ್ರೆಸ್]

ಈ ಎಲ್ಲ ಲೆಕ್ಕಾಚಾರಗಳು ದೋಸ್ತಿ ಪಾಳಯದ2 ವಿಕೆಟ್ ಪತನವನ್ನು ಮತ್ತೆ ಸಾರಿದೆ.  ದೋಸ್ತಿ ಪಡೆಯ ಶಕ್ತಿ ಎರಡಂಕೆ ಹತ್ತಿರಕ್ಕೆ ಬಂದಿದ್ದು ಯಾರ ಬೆಂಬಲವೂ ಇಲ್ಲದೆ ಬಿಜೆಪಿ ಅಧಿಕಾರ ನಡೆಸುವಂತಹ ಸ್ಥಿತಿಗೆ ಏರಿದೆ.

ಒಟ್ಟು ರಾಜೀನಾಮೆ ನೀಡಿರುವವವರು- 13[ಶನಿವಾರ ಕೊಟ್ಟವರು] + 1 ರೋಶನ್ ಬೇಗ್ + ಬುಧವಾರ 2  = 16

ಬೆಂಬಲ ನೀಡಿದ್ದ ಪಕ್ಷೇತರರು ವಾಪಸ್- 2

ಬಿಜೆಪಿಯ ಬಲ 105

ದೋಸಸ್ತಿ ಪಡೆಯಲ್ಲಿದ್ದ 121 ರಲ್ಲಿ 16 ಜನ ಶಾಸಕರು ರಾಜೀನಾಮೆ ನೀಡಿದ್ದು ಇಬ್ಬರು ಪಕ್ಷೇತರರು ಕೈ ಕೊಟ್ಟಿದ್ದಾರೆ. ಇದೀಗ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸದಯದ ಮಟ್ಟಿಗೆ ದೋಸ್ತಿ ಪರ 103 ಜನರಿದ್ದರೆ ಬಿಜೆಪಿ ಪರ 105 ಜನ ಶಾಸಕರಿದ್ದಾರೆ. ಶಾಸಕರ ರಾಜೀನಾಮೆಯಿಂದ ವಿಧಾನಸಭೆ ಬಲಾಬಲ 224 ರಿಂದ 2018ಕ್ಕೆ ಇಳಿದಿದ್ದು ಬಿಜೆಪಿ ಬಳಿ 105 ಶಾಸಕರಿದ್ದಾರೆ.