Asianet Suvarna News Asianet Suvarna News

ಅತೃಪ್ತರಿಗೆ ಮುಂಬೈನಲ್ಲಿ ಧೈರ್ಯ ಹೇಳಿದ ಜಾಧವ್‌!

ಅತೃಪ್ತರಿಗೆ ಮುಂಬೈನಲ್ಲಿ ಧೈರ್ಯ ಹೇಳಿದ ಜಾಧವ್‌| ಬಿಜೆಪಿ ಸರ್ಕಾರ ಬಂದರೆ ಎಲ್ಲ ಸರಿಯಾಗಲಿದೆ: ಸಂಸದ

Karnataka Political Crisis Kalburgi BJP MP Umesh Jadhav Meets Congress JDS Rebel MLAs in Mumbai
Author
Bangalore, First Published Jul 15, 2019, 9:04 AM IST
  • Facebook
  • Twitter
  • Whatsapp

ಕಲಬುರಗಿ[ಜು.15]: ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಡಾ.ಉಮೇಶ್‌ ಜಾಧವ್‌ ಅವರು ಮುಂಬೈ ಹೋಟೆಲ್‌ನಲ್ಲಿ ತಂಗಿರುವ ಅತೃಪ್ತ ಶಾಸಕರನ್ನು ಶನಿವಾರ ತಡರಾತ್ರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್‌ ವಿರುದ್ಧ ಬಂಡೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಜಾಧವ್‌ ಅವರು ಈಗ ತಮ್ಮದೇ ರೀತಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಂಡಾಯ ಶಾಸಕರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಚಿಂಚೋಳಿ ಶಾಸಕರಾಗಿದ್ದ ಡಾ.ಉಮೇಶ್‌ ಜಾಧವ್‌ ಅವರು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಪ್ರಿಯಾಂಕ್‌ ಖರ್ಗೆ ವಿರುದ್ಧ ಬಂಡೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದರು. ಜತೆಗೆ, ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್‌ ಕೊಡಿಸಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಒಂದು ವೇಳೆ ಅತೃಪ್ತ ಶಾಸಕರು ಬಿಜೆಪಿ ಜತೆಗೆ ಗುರುತಿಸಿಕೊಂಡರೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಯಾವುದೇ ಸಮಸ್ಯೆಯಾಗದು ಎಂದು ಬಿಂಬಿಸುವ ಪ್ರಯತ್ನವನ್ನು ಜಾಧವ್‌ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬಂದ ಮೇಲೆ ಎಲ್ಲವೂ ಸರಿ ಹೋಗುತ್ತದೆ ಎಂದೂ ಅಭಯ ನೀಡಿದ್ದಾರೆ ಎಂದು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಸತ್‌ ಕಲಾಪದಲ್ಲಿ ಪಾಲ್ಗೊಂಡಿದ್ದ ಜಾಧವ್‌ ಅವರು ಶುಕ್ರವಾರ ದೆಹಲಿಯಿಂದ ಶನಿವಾರ ಬೆಂಗಳೂರಿಗೆ ಆಗಮಿಸಿ ಬಳಿಕ, ಪಕ್ಷದ ಮುಖಂಡರ ಸೂಚನೆಯಂತೆ ತಡರಾತ್ರಿ ಮುಂಬೈಗೆ ತೆರಳಿದ್ದರು.

Follow Us:
Download App:
  • android
  • ios