ಬೆಂಗಳೂರು[ಜು.19]: ಮೈತ್ರಿ ಸರ್ಕಾರದ ಆಮಿಷಗಳಿಗೆ ಒಳಗಾಗದಂತೆ ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಬಿಜೆಪಿಯ ಪ್ರಯತ್ನಗಳು ವಿಧಾನಸಭೆಯ ಮೊಗಸಾಲೆಯಲ್ಲಿ ಗುರುವಾರ ಕಾಣಿಸಿದವು.

ಮಧ್ಯಾಹ್ನ ಭೋಜನಕ್ಕೆ ಸದನವನ್ನು ಮುಂದೂಡಿದಾಗ ತಮ್ಮ ಶಾಸಕರಿಗೆ ಬಿಜೆಪಿಯೇ ಭೋಜನ ವ್ಯವಸ್ಥೆ ಮಾಡಿತ್ತು. ಭೋಜನಕ್ಕಾಗಿ ಯಾವ ಶಾಸಕರೂ ಹೊರಗೆ ಹೋಗದಂತೆ ಎಚ್ಚರ ವಹಿಸಲಾಗಿತ್ತು. ಎಲ್ಲ ಶಾಸಕರಿಗೆ ಬಿಸಿ ಬೇಳೆ ಬಾತ್‌ ಮತ್ತು ಮೊಸರನ್ನ ವಿತರಿಸಲಾಯಿತು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಜೆಪಿಯ ಎಲ್ಲ ಶಾಸಕರಿಗೂ ಊಟ ವಿತರಣೆ ಮಾಡಲಾಯಿತು. ಶಾಸಕರು ಯಾರೂ ಮೊಗಸಾಲೆಯಿಂದ ಹೊರಹೋಗದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಶಾಸಕರ ಮೇಲೆ ಪ್ರಮುಖ ನಾಯಕರು ಅಲ್ಲಲ್ಲಿ ಕಾಯುತ್ತಿದ್ದ ದೃಶ್ಯ ಕಂಡುಬಂತು. ತಮ್ಮ ಪಕ್ಷದ ಯಾವುದೇ ಶಾಸಕರು ಮೊಗಸಾಲೆಯಿಂದ ಹೊರಗೆ ಹೋಗದಂತೆ ಪಕ್ಷದ ಮುಖಂಡರು ಎಚ್ಚರಿಕೆ ವಹಿಸಿದ್ದರು.