ಬೆಂಗಳೂರು (ಜು.08): ಒಬ್ಬರ ಹಿಂದೆ ಇನ್ನೊಬ್ಬ ಶಾಸಕರು ರಾಜೀನಾಮೆ ಕೊಡುತ್ತಲೇ ಇದ್ದಾರೆ. ಮೈತ್ರಿ ನಾಯಕರ ಮಾತಿಗೆ ಕಿವಿಗೊಡಲು ಯಾವ ಶಾಸಕನೂ ಸಿದ್ಧನಿಲ್ಲ. 

ಬೆಳಗ್ಗೆ ಪಕ್ಷೇತರ ಶಾಸಕ, ಸಚಿವ ಎಚ್. ನಾಗೇಶ್ ಮುಂಬೈಗೆ ತೆರಳಿದ ಬೆನ್ನಲ್ಲೇ, ಸಂಜೆ ಮತ್ತೊಬ್ಬ ಶಾಸಕ ಆರ್. ಶಂಕರ್ ಮುಂಬೈ ವಿಮಾನ ಹತ್ತಿದ್ದಾರೆ.  ಇದರ ಬೆನ್ನಲ್ಲೇ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಖುದ್ದು ಮುಂಬೈಗೆ ಹೊರಟಿರುವುದು ಕುತೂಹಲ ಹುಟ್ಟುಹಾಕಿದೆ.

ಈಗಾಗಲೇ ಮೈತ್ರಿ ಪಕ್ಷಗಳ 14 ಹಾಗೂ ಇಬ್ಬರು ಪಕ್ಷೇತರ  ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ.

ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ಇಲ್ಲಿ