ಬೆಂಗಳೂರು[ಜು.10]: ಬೆಂಗಳೂರಿನಿಂದ ಮುಂಬೈಗೆ ಶಿಫ್ಟ್ ಆಗಿದ್ದ ರಾಜಕೀಯ ಹೈಡ್ರಾಮಾ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಅತೃಪ್ತ ಶಾಸಕರನ್ನು ಭೇಟಿಯಾಗಲು ಮುಂಬೈಗೆ ತೆರಳಿದ್ದ ಡಿಕೆಶಿಯನ್ನು ಪೊಲೀಸರು ತಡೆದಿದ್ದರು. ಆದರೆ ಪಟ್ಟು ಬಿಡದ ಟ್ರಬಲ್ ಶೂಟರ್ ಹೋಟೆಲ್ ಹೊರಗೇ ಕುಳಿತಿದ್ದರು. ಏನೇ ಆದರೂ ಸರಿ ಶಾಸಕರನ್ನು ಭೇಟಿಯಾಗಿಯೇ ಸಿದ್ಧ ಎಂದಿದ್ದ, ಡಿಕೆಶಿ ನಡೆಯನ್ನು ಖಂಡಿಸಿರುವ ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದಾರೆ.

"

ಹೌದು ಇಂದು ಬುಧವಾರ ಬೆಳಗ್ಗೆ ಅತೃಪ್ತ ಶಾಸಕರಿದ್ದ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿಕೊಂಡಿದ್ದ ಡಿಕೆಶಿ ಮುಂಬೈಗೆ ಎಂಟ್ರಿ ಕೊಟ್ಟಿದ್ದರು. ಆದರೆ ಅವರು ಹೋಟೆಲ್ ತಲುಪುವ ಮುನ್ನವೇ ಪೊಲೀಸರು ಅವರನ್ನು ತಡೆದಿದ್ದರು. ಇದೇ ವೇಳೆ ಮುಜುಗರದಿಂದ ತಪ್ಪಿಸಿಕೊಳ್ಳಲು ಹೋಟೆಲ್ ಸಿಬ್ಬಂದಿ ಅವರ ಬುಕಿಂಗ್ ಕ್ಯಾನ್ಸಲ್ ಮಾಡಿದ್ದರು. ಆದರೆ ಪಟ್ಟು ಬಿಡದ ಡಿ. ಕೆ ಶಿವಕುಮಾರ್ ಹೋಟೆಲ್ ಹೊರಗೇ ಚೇರ್ ಹಾಕಿ ಕುಳಿತುಕೊಂಡಿದ್ದರು. 

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪೊಲೀಸರು ಅವರನ್ನು ಅಲ್ಲಿಂದ ತೆರಳುವಂತೆ ಸೂಚಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸದ್ಯ ಬೇರೆ ದಾರಿ ಕಾಣದ ಮುಂಬೈ ಪೊಲೀಸರು ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್‌ರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.