ಬೆಂಗಳೂರು [ಜು.19] : ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ವಿಶ್ವಾಸ ಮತ ಯಾಚನೆ ನಿರ್ಣಯ ಈಗಾಗಲೇ ಸದನದಲ್ಲಿ ಮಂಡನೆ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷವು ತಮ್ಮ ಶಾಸಕರನ್ನು ತಾಜ್‌ ವಿವಾಂತ ಹೋಟೆಲ್‌ಗೆ ಸ್ಥಳಾಂತರಿಸಿದೆ. 

ಕಳೆದ ಹಲವು ದಿನಗಳಿಂದ ತಾಜ್‌ ವಿವಾಂತ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಶಾಸಕರನ್ನು ದೇವನಹಳ್ಳಿಯ ಪ್ರಕೃತಿ ವಿಂಡ್‌ ಫ್ಲವರ್‌ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿತ್ತು. 

ಗುರುವಾರ ಅಧಿವೇಶನಕ್ಕೆ ಶಾಸಕರನ್ನು ನೇರವಾಗಿ ರೆಸಾರ್ಟ್‌ನಿಂದಲೇ ಕರೆ ತರಲಾಗಿತ್ತು. ಗುರುವಾರ ಮಂಡನೆ ಮಾಡಿರುವ ವಿಶ್ವಾಸ ಮತ ಯಾಚನೆ ನಿರ್ಣಯವು ಶುಕ್ರವಾರ ಪ್ರಮುಖ ಘಟ್ಟತಲುಪುವ ನಿರೀಕ್ಷೆ ಇದೆ. ಹೀಗಾಗಿ ಪ್ರಕೃತಿ ವಿಂಡ್‌ ಫ್ಲವರ್‌ಗೆ ಹೋಲಿಸಿದರೆ ವಿಧಾನಸೌಧಕ್ಕೆ ಸಮೀಪದಲ್ಲಿರುವ ತಾಜ್‌ ವಿವಾಂತ ಹೊಟೇಲ್‌ಗೆ ಶಾಸಕರ ವಾಸ್ತವ್ಯ ಬದಲಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.