Asianet Suvarna News Asianet Suvarna News

ಮತ್ತಿಬ್ಬರು ಕೈ ಶಾಸಕರಿಂದ ಮೈತ್ರಿ ಪಾಳಯಕ್ಕೆ ಶಾಕ್ !

ಕರ್ನಾಟಕ ರಾಜಕೀಯ ಪ್ರಹಸನದಲ್ಲಿ ಇಂದು ರಾಜ್ಯ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎದುರಾಗುತ್ತಿದೆ. ಇದೇ ವೇಳೆ ಮತ್ತಿಬ್ಬರು ಕಾಂಗ್ರೆಸಿಗರು ಕೈ ಪಾಳಯಕ್ಕೆ ಶಾಕ್ ನೀಡಿದ್ದಾರೆ. 

Karnataka Political Crisis Congress MLA Srimanta Patil B Nagendra May Absent Floor Test
Author
Bengaluru, First Published Jul 18, 2019, 10:26 AM IST
  • Facebook
  • Twitter
  • Whatsapp

ಬೆಂಗಳೂರು (ಜು.18) : ಸರ್ಕಾರ ವಿಶ್ವಾಸ ಮತ ಯಾಚನೆಗೆ ಸಜ್ಜಾಗಿದ್ದು, ಇಂದು ಅಗ್ನಿ ಪರೀಕ್ಷೆ ಎದುರಾಗುತ್ತಿದೆ.  ವೇಳೆ ಮೈತ್ರಿ ಪಾಳಯಕ್ಕೆ ಶಾಕಿಂಗ್ ಸುದ್ದಿ ಸಿಕ್ಕಿದೆ. 

ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೆಂದ್ರ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ವಿಶ್ವಾಸಮತ ಯಾಚನೆ ವೇಳೆ ಗೈರಾಗುವ ಸಾಧ್ಯತೆ ಇದೆ. 

ಸದನಕ್ಕೆ ಹಾಜರಾಗುವಂತೆ ನಾಗೇಂದ್ರಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಮನವಿ ಮಾಡಿದ್ದು, ಇದುವರೆಗೂ ಕೂಡ ಅವರು ಯಾವುದೇ ನಿಲುವು ಪ್ರಕಟ ಮಾಡಿಲ್ಲ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

ಇನ್ನು ಕಾಂಗ್ರೆಸ್ ಮತ್ತೋರ್ವ ಶಾಸಕ ಶ್ರೀಮಂತ್ ಪಾಟೀಲ್ ಬುಧವಾರ ರೆಸಾರ್ಟ್ ನಿಂದ ತಪ್ಪಿಸಿಕೊಂಡು ತೆರಳಿದ್ದು, ವಿಶ್ವಾಸ ಮತ ಯಾಚನೆಗೆ ಗೈರಾಗಲಿದ್ದಾರೆ ಎನ್ನಲಾಗುತ್ತಿದೆ. 

ಇದರಿಂದ ವಿಶ್ವಾಸ ಮತ ಯಾಚನೆ ಮೂಲಕ ಸರ್ಕಾರ ಉಳಿಸಲು ಯತ್ನಿಸುತ್ತಿರುವ ನಾಯಕರಿಗೆ ಮತ್ತಷ್ಟು ಆತಂಕ ಎದುರಾಗಿದೆ. 

Follow Us:
Download App:
  • android
  • ios