ಎರಡು ತಿಂಗಳ ಹಿಂದಷ್ಟೆ ರಾಜ್ಯ ವ್ಯಾಪ್ತಿ ಡ್ರಗ್ಸ್ ಮಾಫಿಯಾ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ಬಿಸಿ ಮುಟ್ಟಿಸಿದ್ದ ಪೊಲೀಸ್ ಇಲಾಖೆ, ಈಗ ಮಾನವ ಕಳ್ಳ ಸಾಗಾಣಿಕೆ ಮೇಲೆ ಗದಾ ಪ್ರಹಾರಕ್ಕಿಳಿದಿದೆ. ಈ ಸಂಬಂಧ ಡಿಜಿಪಿ ನೀಲಮಣಿ ಎನ್.ರಾಜು ಸುತ್ತೋಲೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ಠಾಣೆಗಳಲ್ಲಿ ಕಣ್ಮರೆಯಾದವರಿಗೆ ಪತ್ತೇದಾರಿಕೆ ಪ್ರಾರಂಭವಾಗಿದೆ. 

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಆತಂಕ ಸೃಷ್ಟಿಸುತ್ತಿರುವ ಮಕ್ಕಳು ಮತ್ತು ಮಹಿಳೆಯರ ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಮೂರು ವರ್ಷಗಳಿಂದ ಕಣ್ಮೆರೆಯಾಗಿರುವವರ ಹುಡುಕಾಟಕ್ಕಾಗಿ ಇದೇ ತಿಂಗಳ 1 ನೇ ತಾರೀಖಿನಿಂದ ಹದಿನೈದು ದಿನಗಳ ಕಾಲ ವಿಶೇಷ ಕಾರ್ಯಾಚರಣೆಗೆ ಚಾಲನೆ ನೀಡಿದೆ.

ಎರಡು ತಿಂಗಳ ಹಿಂದಷ್ಟೆ ರಾಜ್ಯ ವ್ಯಾಪ್ತಿ ಡ್ರಗ್ಸ್ ಮಾಫಿಯಾ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ಬಿಸಿ ಮುಟ್ಟಿಸಿದ್ದ ಪೊಲೀಸ್ ಇಲಾಖೆ, ಈಗ ಮಾನವ ಕಳ್ಳ ಸಾಗಾಣಿಕೆ ಮೇಲೆ ಗದಾ ಪ್ರಹಾರಕ್ಕಿಳಿದಿದೆ. ಈ ಸಂಬಂಧ ಡಿಜಿಪಿ ನೀಲಮಣಿ ಎನ್.ರಾಜು ಸುತ್ತೋಲೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ಠಾಣೆಗಳಲ್ಲಿ ಕಣ್ಮರೆಯಾದವರಿಗೆ ಪತ್ತೇದಾರಿಕೆ ಪ್ರಾರಂಭವಾಗಿದೆ.

ದೇಶದಲ್ಲೇ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಅತಿ ಹೆಚ್ಚು ಮಕ್ಕಳು ಮತ್ತು ಮಹಿಳೆಯರು ಕಾಣೆಯಾಗುತ್ತಿದ್ದು, ಇದರಲ್ಲಿ ಕರ್ನಾಟಕವು ಸಹ ಪ್ರಮುಖವಾಗಿದೆ. ಇನ್ನು ಈ ಪ್ರಕರಣಗಳ ಪೊಲೀಸರ ತನಿಖೆ ಕುರಿತು ಹೈಕೋರ್ಟ್ ಸಹ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಡಿಜಿಪಿ, ಮಕ್ಕಳ ಮತ್ತು ಮಹಿಳೆಯರ ಪತ್ತೆಗೆ ಸೂಚಿಸಿದ್ದಾರೆ.

ಮಕ್ಕಳು ಮತ್ತೆ ಮಹಿಳೆಯರ ನಾಪತ್ತೆ ಪ್ರಕರಣಗಳ ಸಂಬಂಧ ಅಕ್ಟೋಬರ್ 1 ರಿಂದ 15 ವರೆಗೆ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು, 2015 ರಿಂದ 2018 ವರೆಗೆ ದಾಖಲಾಗಿರುವ ಪ್ರಕರಣಗಳ ತನಿಖೆ ನಡೆಸಬೇಕು. ಬಳಿಕ ಈ ಕುರಿತು ಅ. 18 ರಂದು ವರದಿಯನ್ನು ಕೇಂದ್ರ ಕಚೇರಿಗೆ ಕಳುಹಿಸುವಂತೆಡಿಜಿಪಿ ಸುತ್ತೋಲೆಯಲ್ಲಿ ಹೇಳಿದ್ದಾರೆ. 

ಈ ಕಾರ್ಯಾಚರಣೆ ಮೇಲುಸ್ತುವಾರಿಯನ್ನು ಆಯಾ ವಲಯ ಐಜಿಪಿ ಹಾಗೂ ಪೊಲೀಸ್ ಆಯುಕ್ತರು ನಿರ್ವಹಣೆ ಮಾಡಬೇಕು. ಈ ವೇಳೆ ಪತ್ತೆಯಾಗುವ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಪ್ರತ್ಯೇಕವಾಗಿ ಸಿಬ್ಬಂದಿಯನ್ನು ನಿಯೋಜಿಸುವಂತೆ ಹೇಳಿರುವ ಡಿಜಿಪಿ, ಈ ನಾಪತ್ತೆ ಪ್ರಕರಣಗಳ ತನಿಖೆ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯತನ ವಹಿಸಬಾರದು ಎಂದಿದ್ದಾರೆ. ಮಾನವ ಕಳ್ಳ ಸಾಗಾಣಿಕೆ: ವಯಸ್ಕರು ಕಣ್ಮರೆಯಾದರೆ ಸಾಮಾಜಿಕ ಅಥವಾ ಆರ್ಥಿಕ ಸಮಸ್ಯೆಗಳನ್ನು ಪರಿಗಣಿಸಬಹುದು. 

ಆದರೆ ಮಕ್ಕಳ ನಾಪತ್ತೆಯನ್ನು ಆ ದೃಷ್ಟಿಯಿಂದ ನೋಡಬಾರದು. ಇದರಲ್ಲಿ ಮಾನವ ಕಳ್ಳ ಸಾಗಾಣಿಕೆ ಹಾಗೂ ಕೆಲ ಸಮಾಜಘಾತುಕ ಶಕ್ತಿಗಳ ಪಾತ್ರದ ಇದೆ ಎಂದು ರಾಜ್ಯ ಅಪರಾಧ ವಿಭಾ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಹೇಳುತ್ತಾರೆ. 4 ತಿಂಗಳು ಕಳೆದರೂ ಸಹ ಮಕ್ಕಳು ಪತ್ತೆಯಾಗದೆ ಹೋದರೆ ಮಾನವ ಕಳ್ಳ ಸಾಗಾಣಿಕೆ ಜಾಲದಲ್ಲಿ ಸಿಲುಕಿದ್ದಾರೆ ಎಂದೇ ಆ ಆರೋಪದಡಿ ಪ್ರಕರಣ ದಾಖಲಾ ಗಿಸುವಂತೆ ಸೂಚಿಸಲಾಗಿದೆ ಎನ್ನುತ್ತಾರೆ ಸಲೀಂ. 

ಗಿರೀಶ್ ಮಾದೇನಹಳ್ಳಿ