ಚಿಕ್ಕಬಳ್ಳಾಪುರ[ಆ. 15]   ಲೋಕಸಭಾ ಚುನಾವಣೆಯಲ್ಲಿ ಮೋದಿ v/s ಮಹಾಘಟಬಂಧನ್ ನಡುವೆ ನಡೆಯಿತು. ಆದರೆ ಗೆದ್ದಿದ್ದು ಮೋದಿ ಮಾತ್ರ. ಹಾಗೆಯೇ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಗೆಲುವು ಖಚಿತ.  ಚಿಕ್ಕಬಳ್ಳಾಪುರದಲ್ಲಿ ಕುತಂತ್ರಿಗಳೆಲ್ಲಾ ಸೇರಿ  ಮಹಾಘಟಬಂಧನ್  ಮಾಡಿಕೊಂಡಿದ್ದಾರೆ. ಅವರ ಸೋಲು ಖಚಿತ ಎಂದು ಚಿಕ್ಕಬಳ್ಳಾಪುದಲ್ಲಿ ಅನರ್ಹ ಶಾಸಕ ಡಾ ಸುಧಾಕರ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆ, ಮುನ್ನಡೆ ಇರುವುದಿಲ್ಲ. ತೀರ್ಪು ಬಂದಾಗ ಯಾರದ್ದು ಸರಿ, ಯಾರದು ತಪ್ಪು ಎನ್ನುವುದು ಗೊತ್ತಾಗಲಿದೆ.  ಸತ್ಯ ಹರಿಚ್ಚಂದ್ರ ಎಂದು ಹೇಳಿಕೊಳ್ಳುತ್ತಿರುವ ರಮೇಶ್ ಕುಮಾರ್ ಅವರಿಗೆ ತೀರ್ಪು ಏನು? ಎಂದು ಸುಪ್ರೀಂ ಕೋರ್ಟ್ ಹೇಳಲಿದೆ. ಆಗ ಯಾರು ಸತ್ಯವಂತರು ಯಾರು ಸುಳ್ಳುಗಾರರು ಎಂಬುದು ಗೊತ್ತಾಗಲಿದೆ. ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಗೋತ್ತಾಗಲಿದೆ ಎಂದರು.

ಪೋನ್ ಕದ್ದಾಲಿಕೆ: ಹೆಸರು ಕೇಳಿಬಂದ ಅಧಿಕಾರಿಗಳಿಗೆ BSY ಬಿಗ್ ಶಾಕ್?

ಯಾರೇ ಪೋನ್ ಕದ್ದಾಲಿಕೆ ಕೆಲಸ ಮಾಡಿದ್ದರೂ ಅದು ಪರಮನೀಚ ಕೆಲಸ.  ಅವರ ಮೇಲೆ ಕಾನೂನು ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಪ್ರಧಾನಿ ಮೋದಿ ದಿಟ್ಟ ನಿರ್ಧಾರ ಕೈಗೊಳ್ಳುತ್ತಿದ್ದು ಭಾರತಿಯರೆಲ್ಲರೂ ಸಹಕಾರ‌ ಕೋಡಬೇಕು ಎಂದರು.