ತಮ್ಮ ಮಗುವನ್ನು ಅಂಗನವಾಡಿಗೆ ಸೇರಿಸಿದ ಜಿಲ್ಲಾಧಿಕಾರಿ! ಚಮೋಲಿ ಜಿಲ್ಲೆಯ ಜಿಲ್ಲಾ ಮೆಜಿಸ್ಟ್ರೇಟ್ ಸ್ವಾತಿ ಭಧೋರಿಯಾ! ಮಗ ಅಭ್ಯುದಯನನ್ನು ಅಂಗನವಾಡಿಗೆ ಸೇರಿಸಿದ ಸ್ವಾತಿ! ಸ್ವಾತಿಗೆ ಸಾಮಾನ್ಯರಂತೆ ತಮ್ಮ ಮಗು ಬೆಳೆಯಲಿ ಎಂಬ ಆಶಯ

ಡೆಹ್ರಾಡೂನ್(ನ.2): ಉನ್ನತ ಹುದ್ದೆಯಲ್ಲಿರುವವರು ಯಾವತ್ತೂ ತಮ್ಮ ಮಕ್ಕಳನ್ನು ಹೈಫೈ ಶಾಲೆಗಳಿಗೆ ಸೇರಿಸುವುದು ಸಾಮಾನ್ಯ. ಆದರೆ ಅದಕ್ಕೆ ಅಪವಾದವೆಂಬಂತೆ ಜಿಲ್ಲಾಧಿಕಾರಿಯೊಬ್ಬರು ತಮ್ಮ ಮಗನನ್ನು ಅಂಗನವಾಡಿಗೆ ಸೇರಿಸಿದ್ದಾರೆ.

ಚಮೋಲಿ ಜಿಲ್ಲೆಯ ಜಿಲ್ಲಾ ಮೆಜಿಸ್ಟ್ರೇಟ್ ಸ್ವಾತಿ ಭಧೋರಿಯಾ ತಮ್ಮ ಎರಡೂವರೆ ವರ್ಷ ಪ್ರಾಯದ ಮಗ ಅಭ್ಯುದಯನನ್ನು, ದುಬಾರಿ ಶಾಲೆಯ ಬದಲು ಗೋಪೇಶ್ವರ ಎಂಬ ಗ್ರಾಮದ ಅಂಗನವಾಡಿಗೆ ಸೇರಿಸಿದ್ದಾರೆ.

ತನ್ನ ಮಗ ಇತರೊಂದಿಗೆ ಹಂಚುವ, ಸಹಕರಿಸುವ ಅಭ್ಯಾಸ ಬೆಳೆಸಿಕೊಳ್ಳಲಿ ಎಂಬ ಉದ್ದೇಶದಿಂದ ಆ ರೀತಿಯ ವಾತಾವರಣವಿರುವಲ್ಲಿ ಸೇರಿಸಿವುದಾಗಿ ಆಕೆ ಹೇಳಿದ್ದಾರೆ.

Scroll to load tweet…

ಅಂಗನವಾಡಿಗಳಲ್ಲಿ ಶಿಕ್ಷಣ, ಆಟೋಟ ಹಾಗೂ ಊಟ-ತಿಂಡಿ ಎಲ್ಲವೂ ಒಟ್ಟೋಟ್ಟಾಗಿರುತ್ತದೆ. ಇತರ ಮಕ್ಕಳ ಜೊತೆ ಆತ ಅಂಗನವಾಡಿಯನ್ನು ಬಹಳವಾಗಿ ಆನಂದಿಸುತ್ತಾನೆ ಎಂದು ಸ್ವಾತಿ ಹೇಳಿದ್ದಾರೆ.

ಅಂಗನವಾಡಿಗಳ ಬಗ್ಗೆ ನಮಗಿರುವ ದೃಷ್ಟಿಕೋನ ಕೂಡಾ ಬದಲಾಗಬೇಕು ಎಂದು ಸ್ವಾತಿ ಹೇಳಿದ್ದಾರೆ. ಸ್ವಾತಿ ಪತಿ, ನಿತಿನ್ ಭಧೋರಿಯಾ ಕೂಡಾ ಐಎಎಸ್ ಅಧಿಕಾರಿಯಾಗಿದ್ದು, ಅಲ್ಮೋರಾ ಜಿಲ್ಲಾಧಿಕಾರಿಯಾಗಿದ್ದಾರೆ.