3ನೇ ಹಂತದ ಲೋಕ ಸಮರ : 1352 ಅಭ್ಯರ್ಥಿಗಳು ಕಣದಲ್ಲಿ, 244 ಅಭ್ಯರ್ಥಿಗಳಿಗೆ ಕ್ರಿಮಿನಲ್ ಹಿನ್ನೆಲೆ
ಲೋಕಸಭೆಯ ಮೂರನೇ ಹಂತದ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾಗಿದ್ದು, ಅಂತಿಮವಾಗಿ 94 ಸ್ಥಾನಕ್ಕೆ 1352 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.
ನವದೆಹಲಿ: ಲೋಕಸಭೆಯ ಮೂರನೇ ಹಂತದ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾಗಿದ್ದು, ಅಂತಿಮವಾಗಿ 94 ಸ್ಥಾನಕ್ಕೆ 1352 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.1352 ಅಭ್ಯರ್ಥಿಗಳ ಪೈಕಿ 244 (ಶೇ.18) ಜನರ ವಿರುದ್ಧ ವಿವಿಧ ರೀತಿಯ ಕ್ರಿಮಿನಲ್ ಕೇಸು ದಾಖಲಾಗಿವೆ. ಇನ್ನು ಅಭ್ಯರ್ಥಿಗಳ ಸರಾಸರಿ ಆಸ್ತಿ 5.66 ಕೋಟಿ ರು. ಈ ಪೈಕಿ 392 ಜನರ ಆಸ್ತಿ 1 ಕೋಟಿ ರು.ಗಿಂತಲೂ ಅಧಿಕ. ಅತ್ಯಂತ ಶ್ರೀಮಂತ ಅಭ್ಯರ್ಥಿಯ ಆಸ್ತಿ 1,361 ಕೋಟಿ ರು. ಎಂದು ಎಡಿಆರ್ ವರದಿ ಹೇಳಿದೆ.
ಕ್ರಿಮಿನಲ್ ಮೊಕದ್ದಮೆ ಇರುವ 244 ಮಂದಿಯ ಪೈಕಿ 7 ಮಂದಿ ಈಗಾಗಲೇ ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಾಬೀತಾಗಿ ಶಿಕ್ಷೆ ಅನುಭವಿಸಿದ್ದಾರೆ. ಇದರಲ್ಲಿ 5 ಮಂದಿಯ ಮೇಲೆ ಕೊಲೆ ಆರೋಪವಿದ್ದರೆ, 24 ಮಂದಿಯ ಮೇಲೆ ಕೊಲೆ ಯತ್ನದ ಪ್ರಕರಣ ಬಾಕಿಯಿದೆ. ಜೊತೆಗೆ 38 ಮಂದಿಯ ಮೇಲೆ ಮಹಿಳಾ ದೌರ್ಜನ್ಯ ಸಂಬಂಧಿ ಪ್ರಕರಣಗಳಿದ್ದರೆ, 17 ಮಂದಿಯ ಮೇಲೆ ದ್ವೇಷಭಾಷಣ ಮಾಡಿದ ಕುರಿತು ಪ್ರಕರಣ ದಾಖಲಾಗಿದೆ.
ಪ್ರಜ್ವಲ್ ಪರ ಪ್ರಚಾರ ಮಾಡಿದ್ದ ಮೋದಿ ಈಗೇನು ಹೇಳುತ್ತಾರೆ: ಪ್ರಿಯಾಂಕಾ ಗಾಂಧಿ
ಹಾಗೆಯೇ ಉಮೇದುವಾರಿಕೆ ಸಲ್ಲಿಸಿದವರಲ್ಲಿ ಶೇ.47 (639) ಮಂದಿ 5-12ನೇ ತರಗತಿ ವರೆಗೂ ವ್ಯಾಸಂಗ ಮಾಡಿದ್ದರೆ, ಶೇ.44 (591) ಮಂದಿ ಪದವೀಧರರಾಗಿದ್ದಾರೆ. ಜೊತೆಗೆ ವಯೋಮಾನವನ್ನು ಪರಿಗಣಿಸಿದಾಗ ಶೇ.53 (712) ಮಂದಿ 41 ರಿಂದ 60 ವಯೋಮಾನದವರಾಗಿದ್ದು, ಶೇ.30(411) ಮಂದಿ 25-40ರ ವಯೋಮಾನಕ್ಕೆ ಸೇರಿದ ಅಭ್ಯರ್ಥಿಗಳಾಗಿದ್ದಾರೆ.
ಜೊತೆಗೆ ಈ ಬಾರಿಯೂ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಭಾರೀ ಕಡಿಮೆ ಪ್ರಮಾಣದಲ್ಲಿದ್ದು, ಕೇವಲ ಶೇ.9ರಷ್ಟು (123) ಮಹಿಳೆಯರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮೊದಲ ಎರಡು ಹಂತದಲ್ಲೂ ಮಹಿಳಾ ಮೀಸಲು ಪ್ರಮಾಣ ಶೇ.8ರಷ್ಟಿತ್ತು.
ಜೆಡಿಎಸ್‌ನಿಂದ ಪ್ರಜ್ವಲ್ ರೇವಣ್ಣ ಉಚ್ಚಾಟನೆಗೆ ನಿರ್ಧಾರ: ಎಚ್.ಡಿ.ಕುಮಾರಸ್ವಾಮಿ
ಶ್ರೀಮಂತ ಅಭ್ಯರ್ಥಿಗಳು
- ಪಲ್ಲವಿ ಶ್ರೀನಿವಾಸ್ ಡೆಂಪೋ - ₹1,361 ಕೋಟಿ
- ಜ್ಯೋತಿರಾದಿತ್ಯ ಸಿಂಧಿಯಾ - ₹424 ಕೋಟಿ
- ಛತ್ರಪತಿ ಶಾಹು ಶಹಜಿ - ₹342 ಕೋಟಿ
- ಪ್ರಭಾ ಮಲ್ಲಿಕಾರ್ಜುನ್ - ₹241 ಕೋಟಿ
- ಉದಯನ್‌ರಾಜೆ ಭೋಸ್ಲೆ - ₹223 ಕೋಟಿ