ಹುಬ್ಬಳ್ಳಿ(ಮಾ.22): ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ(57) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು(ಮಾ.23) ಬೆಳಗ್ಗೆ ಶಿವಳ್ಳಿಗೆ ತೀವ್ರ ಹೃದಯಾಘಾತ ಸಂಭವಿಸಿತ್ತು. ಹೀಗಾಗಿ ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆಗೆ ದಾಖಲಾಗಿದ್ದರು. ತುರ್ತು ನಿಘಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಳ್ಳಿ ವಿಧಿವಶರಾಗಿದ್ದಾರೆ. 

ಇದನ್ನೂ ಓದಿ: ಧಾರವಾಡ ದುರಂತ: ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭೀಕರತೆ!

ಶಿವಳ್ಳಿ ನಿಧನ ಕಾಂಗ್ರೆಸ್ ನಾಯಕರು, ಬಂಧುಗಳು, ಕುಟುಂಬಸ್ಥರು ಹಾಗೂ ಕಾರ್ಯಕರ್ತರಿಗೆ ಆಘಾತ ತಂದಿದೆ. ಕೆಎಸ್ ಆರ್ ಪಿ ಪೊಲೀಸರು ಸೇರಿದಂತೆ ಆಸ್ಪತ್ರೆ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಜಿಲ್ಲೆಯ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಇತ್ತೀಚೆಗಷ್ಟೇ ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದ ಶಿವಳ್ಳಿ, ಧಾರವಾಡ ಕಟ್ಟಡ ಕುಸಿತದ ಸ್ಥಳಕ್ಕೆ ಆಗಮಿಸಿ ಆಘಾತ ವ್ಯಕ್ತಪಡಿಸಿದ್ದರು. ಕಟ್ಟದಡಿ ಸಿಲುಕಿದವರ ಕುಟುಂಬಗಳಿಗೆ ಧರ್ಯ ಹೇಳಿದ್ದರು. ಕಟ್ಟದ ಕುಸಿತದ ಸ್ಥಳದಲ್ಲೇ ಠಿಕಾಣಿ ಹೂಡಿದ್ದ ಶಿವಳ್ಳಿ ಪರಿಸ್ಥಿತಿ ಅವಲೋಕಿಸಿದ್ದರು. ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜೊತೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು. ಮೂರು ದಿನಗಳ ಕಾಲ ರಕ್ಷಣಾ ಕಾರ್ಯದಲ್ಲಿ ಮೊಕ್ಕಾ ಹೂಡಿದ್ದ ಅವರು ತುಂಬ ಬಳಲಿದ್ದರು ಆರೋಗ್ಯ ಲೆಕ್ಕಿಸದೇ ನೊಂದವರ ಬಳಿ ನಿಂತಿದ್ದರು.  ಇದರಿಂದ ಶಿವಳ್ಳಿ ಆರೋಗ್ಯ ಏರುಪೇರಾಗಿತ್ತು. 

ಇದನ್ನೂ ಓದಿ: ಕಟ್ಟದ ದುರಂತಕ್ಕೆ 14 ಬಲಿ : ಮಾಜಿ ಸಚಿವರ ಮಾವ ವಶಕ್ಕೆ?

ಶುಕ್ರವಾರ(ಮಾ.22) ಬೆಳಗ್ಗೆ ಹೃದಯಾಘಾತಕ್ಕೆ ತುತ್ತಾದ ಶಿವಳ್ಳಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ICUನಲ್ಲಿ ಶಿವಳ್ಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸಿದ ಶಿವಳ್ಳಿ ನಿಧನರಾಗಿದ್ದಾರೆ. ಶಿವಳ್ಳಿ ನಿದಧನದಿಂದ ಕುಟುಂಬಸ್ಥರು ಹಾಗೂ ಕಾರ್ಯಕರ್ತರ ಆಕ್ರಂದನ ಮುಗಿಲು ಮುಟ್ಟಿದೆ. ಕುಂದಗೋಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವಳ್ಳಿ 3 ಬಾರಿ ಆಯ್ಕೆಯಾಗಿದ್ದರು.ಹೆಚ್‌ಡಿಕೆ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾಗಿದ್ದರು.