ಎಸ್'ಎಸ್'ಎಲ್ಸಿ, ಸಿಇಟಿ ಪರೀಕ್ಷೆ ನಿಗದಿಗಿಂತ ಮೊದಲೇ ನಡೆಸಲು ಚರ್ಚೆ ನಡೆಸಲಾಗಿದ್ದು, ಸುವರ್ಣ ನ್ಯೂಸ್ಗೆ ಆಯೋಗದ ಉನ್ನತ ಮೂಲಗಳ ಮಾಹಿತಿ ದೊರೆತಿದೆ.
ಬೆಂಗಳೂರು(ಅ.24): ಕರ್ನಾಟಕ ವಿಧಾನಸಭಾ ಚುನಾವಣೆ ಮೇ.2ರಂದು ನಡೆಯುವ ಸಾಧ್ಯತೆಯಿದೆ. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎನ್ನಲಾಗಿದೆ. ಪ್ರಸ್ತುತ ರಾಜ್ಯ ವಿಧಾನಸಭಾ ಅವಧಿ ಮೇ 5ಕ್ಕೆ ಅಂತ್ಯಗೊಳ್ಳಲಿದ್ದು, ಮೇ ಮೊದಲ ವಾರದಲ್ಲಿ ಚುನಾವಣೆ ನಡೆಸಬಹುದೇ ಎಂಬ ಬಗ್ಗೆ ಕರ್ನಾಟಕ ಮುಖ್ಯ ಕಾರ್ಯದರ್ಶಿಗೆ ಆಯೋಗದಿಂದ ಪತ್ರ ಬರೆಯಲಾಗಿದೆ. ಎಸ್'ಎಸ್'ಎಲ್ಸಿ, ಸಿಇಟಿ ಪರೀಕ್ಷೆ ನಿಗದಿಗಿಂತ ಮೊದಲೇ ನಡೆಸಲು ಚರ್ಚೆ ನಡೆಸಲಾಗಿದ್ದು, ಸುವರ್ಣ ನ್ಯೂಸ್ಗೆ ಆಯೋಗದ ಉನ್ನತ ಮೂಲಗಳ ಮಾಹಿತಿ ದೊರೆತಿದೆ.
