ಉಡುಪಿ[ಮಾ. 06] ಪಕ್ಷ ಹೇಳಿದರೇ ಲೋಕಸಭೆಗೆ ಸ್ಪರ್ಧಿಸುತ್ತೇನೆ ಎಂದು ಸಚಿವೆ ಜಯಮಾಲಾ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಜಯಮಾಲಾ ಲೋಕ ಕಣಕ್ಕೆ ಧುಮುಕಲು ಸಿದ್ಧ ಎಂದರು.

ಜಯಮಾಲಾ ಹೇಳಿಕೆ ಸಹಜವಾಗಿಯೇ ಕುತೂಹಲ ತಂದಿದೆ. ವಿಧಾನ ಪರಿಷತ್ ಸದಸ್ಯೆಯಾಗಿರುವ ಜಯಮಾಲಾ ರಾಜ್ಯದ ದೋಸ್ತಿ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.

ಸುಮಲತಾ v/s ನಿಖಿಲ್: ಸ್ಯಾಂಡಲ್‌ವುಡ್‌ ಸ್ಟಾರ್‌ಗಳಿಗೆ ಶುರುವಾಗಿದೆ ಸಂಕಷ್ಟ

 ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಮಾತು ಬಂದಾಗ ಜಯಮಾಲಾ ಅವರ ಸ್ಥಾನಕ್ಕೆ ಕುತ್ತು ಬಂತು ಎಂದೇ ವ್ಯಾಖ್ಯಾನ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಜಯಮಾಲಾ ಲೋಕ ಕದನದ ಮಾತು ಹೇಳಿದ್ದಾರೆ. ಒಂದು ವೇಳೆ ಲೋಕ ಟಿಕೆಟ್ ಸಿಕ್ಕರೆ ಜಯಮಾಲಾ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಕುತೂಹಲವೂ ಹೆಚ್ಚಿದೆ.