ಖರ್ಗೆ, ಸಿದ್ದು ಹಿಂದಿಕ್ಕಿ ದೆಹಲಿ ಸಾಮ್ರಾಜ್ಯಕ್ಕೆ ಡಿಕೆಶಿ ಲಗ್ಗೆ?

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿ ಸ್ಥಾನ ತೊರೆಯುವ ನಿರ್ಧಾರ ಮಾಡಿದ್ದಾರೆ.ಲೋಕಸಭಾ ಚುನಾವಣೆ ಸೋಲಿನ ತಕ್ಷಣವೇ ರಾಹುಲ್ ಇಂಥದ್ದೊಂದು ತೀರ್ಮಾನ ತೆಗೆದುಕೊಂಡಿದ್ದರು. ಸಹಜವಾಗಿಯೇ  ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರೇಸ್ ಆರಂಭವಾಗಿದೆ.. ಕರ್ನಾಟಕದಿಂದಲೂ ಒಂದು ಹೆಸರು ಕೇಳಿ ಬಂದಿದೆ.

Karnataka Minister DK Shivakumar Joins AICC President Race

ಬೆಂಗಳೂರು/ನವದೆಹಲಿ[ಜು. 05] ಲೋಕಸಭಾ ವಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ  ಎಲ್ಲ ಕಾಂಗ್ರೆಸ್ ಮುಖಂಡರನ್ನು ಈ ನಾಯಕ ಹಿಂದಿಕ್ಕಿ ದೆಹಲಿ ರೇಸ್‌ಗೆ ಏರಿದ್ದಾರೆ. ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಪಕ್ಷವನ್ನು ಮತ್ತೆ ಕಟ್ಟಿ ಬೆಳೆಸುವ ಜವಾಬ್ದಾರಿ ಜತೆಗೆ ಸವಾಲು ಯಾರಿಗೆ ದೊರೆಯಲಿದೆ? 

ರಾಜ್ಯದ ನಾಯಕರನ್ನೆಲ್ಲ ಹಿಂದಿಕ್ಕಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಹುದ್ದೆಗೆ ಆರಂಭವಾಗಿರುವ ರೇಸ್ ನಲ್ಲಿ ಯಾರೆಲ್ಲ ಇದ್ದಾರೆ?  ಕೆಪಿಸಿಸಿ ಅಧ್ಯಕ್ಷ ಸ್ಥಾನದ ಭರ್ತಿ ವೇಳೆಯೂ ಡಿ.ಕಡ.ಶಿವಕುಮಾರ್ ಹೆಸರು ಕೇಳಿಬಂದಿದ್ದರೂ ಅಂತಿಮವಾಗಿ ದಿನೇಶ್ ಅವರನ್ನು ಆಯ್ಕೆ ಮಾಡಲಾಗಿತ್ತು.

ಪಂಜಾಬ್ ಮೂಲದ ಪತ್ರಕರ್ತೆಯೊಬ್ಬರು ಮಾಡಿದ ಸೋಶಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಲ್ವರ ಹೆಸರನ್ನು ಉಲ್ಲೇಖ ಮಾಡಿ ಹಾಕಿರುವ ಪೋಸ್ಟ್ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಡೆದುಕೊಂಡಿದೆ.

ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷವನ್ನು ತಳ ಮಟ್ಟದಿಂದ ಕಟ್ಟಿ ಬೆಳೆಸಲು.. ಪಕ್ಷವನ್ನು ಮುನ್ನಡೆಸಲು ಯಾರಿಂದ ಸಾಧ್ಯ? ಯಾರು ಯೋಗ್ಯರು ಎಂಬ ಸಮೀಕ್ಷೆ ಮಾಡುವ ಕೆಲಸ ಮಾಡಿದ್ದರು.

ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಸಚಿನ್ ಪೈಲಟ್, ಪ್ರಿಯಾಂಕಾ ಗಾಂಧಿ ಜತೆ ರೇಸ್ ನಲ್ಲಿ ಕರ್ನಾಟಕದ ನಾಯರೊಬ್ಬರು ಕಾಣಿಸಿಕೊಂಡಿದ್ದಾರೆ. ಅದು ಬೇರೆ ಯಾರೂ ಅಲ್ಲ ದೋಸ್ತಿ ಸರಕಾರದ ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ.ಶಿವಕುಮಾರ್.

ಆನಂದ್ ಸಿಂಗ್ ರಾಜೀನಾಮೆ ಮತ್ತು ಡಿಕೆ ಶಿವಕುಮಾರ್ ಮೌನ

ಶೇ. 36 ರಷ್ಟು ಜನ ಅಮರಿಂದರ್ ಸಿಂಗ್ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂದಿದ್ದರೆ ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೖಲಟ್ ಶೇ. 33 ಪ್ರಿಯಾಂಕಾ ವಾದ್ರಾ ಶೇ. 17 ಮತ್ತು ಡಿ.ಕೆ.ಶಿವಕುಮಾರ್ ಶೇ. 14 ವೋಟಿಂಗ್ ಪಡೆದುಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರನ್ನು ಹಿಂದಿಕ್ಕಿ ಡಿಕೆಶಿ ರಾಷ್ಟ್ರಮಟ್ಟದ ಕಾಂಗ್ರೆಸ್ ರೇಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

 

Latest Videos
Follow Us:
Download App:
  • android
  • ios