ಇವತ್ತು ಕಲಾಪ ಶುರುವಾಗ್ತಿದಂತೆ ಧಾರವಾಡ ಜಿ.ಪಂ ಸದಸ್ಯ ಯೋಗೀಶ್ಗೌಡ ಹತ್ಯೆ ಪ್ರಕರಣದಲ್ಲಿ ಸಚಿವರ ಪಾತ್ರವಿದೆ ಅಂತ ಆರೋಪಿಸಿ ಬಿಜೆಪಿ ಸದಸ್ಯರು ಚರ್ಚೆಗೆ ಅವಕಾಶ ಕೋರಿದರು. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆಯೂ ಚರ್ಚೆಗೆ ಅವಕಾಶ ಕೊಡಬೇಕು ಅಂತ ಪಟ್ಟು ಹಿಡಿದರು
ಬೆಳಗಾವಿಯಲ್ಲಿ 10 ದಿನಗಳ ಅಧಿವೇಶನ ನಡೀತು. ಆದ್ರೆ ಚರ್ಚೆ ಆಗಿದ್ದೆಷ್ಟು.. ಗಲಾಟೆ ನಡೆದಿದ್ದೆಷ್ಟು ಅಂತಾ ನೋಡಿದ್ರೆ ಗಲಾಟೆಯೇ ಅಧಿವೇಶವನ್ನು ನುಂಗಿ ಹಾಕಿದೆ. ಪ್ರತಿಪಕ್ಷ ಬಿಜೆಪಿ ಧರಣಿಯೊಂದಿಗೆ ಕೊನೆಯ ದಿನದ ವಿಧಾನಸಭಾ ಕಲಾಪ ಬಲಿಯಾಗುವುದರೊಂದಿಗೆ ಚಳಿಗಾಲದ ಅಧಿವೇಶನಕ್ಕೆ ತೆರೆಬಿದ್ದಿದೆ.
10 ದಿನಗಳ ಬೆಳಗಾವಿ ಅಧಿವೇಶನ ಅಂತ್ಯ
ಹತ್ತು ಹಲವು ನಿರೀಕ್ಷೆಗಳೊಂದಿಗೆ ಶುರುವಾಗಿದ್ದ ಬೆಳಗಾವಿ ಅಧಿವೇಶನ ಅಂತ್ಯವಾಗಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ರಾಜಕೀಯ ಮತ್ತು ಆಡಳಿತಾತ್ಮಕ ಪರಿಹಾರದ ಸಂದೇಶ ರವಾನೆಯಾಗಲಿದೆ ಅನ್ನೋ ನಿರೀಕ್ಷೆ ಹುಸಿಯಾಗಿದೆ. ಖಾಲಿ ಖಾಲಿ ಕುರ್ಚಿಗಳೊಂದಿಗೆ ಶುರುವಾದ ಅಧಿವೇಶನ ಖಾಲಿ ಖಾಲಿ ಕುರ್ಚಿಗಳ ಜೊತೆ ಗದ್ದಲದಲ್ಲೇ ಅಂತ್ಯವಾಗಿದೆ.
ಇವತ್ತು ಕಲಾಪ ಶುರುವಾಗ್ತಿದಂತೆ ಧಾರವಾಡ ಜಿ.ಪಂ ಸದಸ್ಯ ಯೋಗೀಶ್ಗೌಡ ಹತ್ಯೆ ಪ್ರಕರಣದಲ್ಲಿ ಸಚಿವರ ಪಾತ್ರವಿದೆ ಅಂತ ಆರೋಪಿಸಿ ಬಿಜೆಪಿ ಸದಸ್ಯರು ಚರ್ಚೆಗೆ ಅವಕಾಶ ಕೋರಿದರು. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆಯೂ ಚರ್ಚೆಗೆ ಅವಕಾಶ ಕೊಡಬೇಕು ಅಂತ ಪಟ್ಟು ಹಿಡಿದರು. ಇದಕ್ಕೆ ಅವಕಾಶ ಕೊಡಲು ಸ್ಪೀಕರ್ ನಿರಾಕರಿಸಿದರು. ಇದರಿಂದ ಸದನದಲ್ಲಿ ಗದ್ದಲ ಉಂಟಾಯಿತು.
ಈ ಮಧ್ಯೆ ಜೆಡಿಎಸ್ ಸದಸ್ಯರು ನೈಸ್ ವರದಿ ಬಗ್ಗೆ ಸರಕಾರ ಉತ್ತರ ಕೊಡಬೇಕು ಮತ್ತು ಇಂಧನ ಖರೀದಿ ಕುರಿತು ಸದನ ಸಮಿತಿ ಕೊಟ್ಟ ವರದಿಯ ಮೇಲೆ ಚರ್ಚೆ ನಡೆಸಲು ಅವಕಾಶ ಕೊಡಬೇಕು ಅಂತ ಒತ್ತಾಯಿಸಿದರು. ಎರಡು ಬಾರಿ 10 ನಿಮಿಷಗಳ ಕಾಲ ಕಲಾಪ ಮುಂದೂಡಿದರೂ ಸದನದಲ್ಲಿ ವಿಪಕ್ಷಗಳ ಪ್ರತಿಭಟನೆ ನಿಲ್ಲಲಿಲ್ಲ. ಕೊನೆಗೆ ಅನಿವಾರ್ಯವಾಗಿ ಕಲಾಪವನ್ನು ಅನಿರ್ದಿಷ್ಟಾವಧಿ ಕಾಲ ಮುಂದೂಡುವ ನಿರ್ಧಾರವನ್ನ ಸ್ಪೀಕರ್ ಕೈಗೊಂಡರು.
ಬೆಳಗಾವಿ ಅಧಿವೇಶನದ ಆಗಿದ್ದೇನು?
40 ಗಂಟೆ 45 ನಿಮಿಷಗಳ ಕಾಲ ನಡೆದ ವಿಧಾನಸಭಾ ಕಲಾಪ
5 ಗಂಟೆ 47 ನಿಮಿಷಗಳ ಕಾಲ ಮಾತ್ರ ಉತ್ತರಕರ್ನಾಟಕ ಸಮಸ್ಯೆ ಚರ್ಚೆ
ಉತ್ತರಕರ್ನಾಟಕ ಸಮಸ್ಯೆಗಳ ಚರ್ಚೆಯಲ್ಲಿ 4 ಮಂದಿ ಶಾಸಕರು ಭಾಗಿ
ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ವಿಧೇಯಕ ಅಂಗೀಕಾರ
11 ವಿಧೇಯಕಗಳು ಈ ಬಾರಿಯ ಅಧಿವೇಶನದಲ್ಲಿ ಅಂಗೀಕಾರ
ವಿದ್ಯುತ್ ಖರೀದಿ ಅವ್ಯವಹಾರದ ಕುರಿತು ಸದನ ಸಮಿತಿಯಿಂದ ವರದಿ ಮಂಡನೆ
ಕೆರೆ ಒತ್ತುವರಿ ಕುರಿತ ಸದನ ಸಮಿತಿಯಿಂದ ವರದಿ ಸಲ್ಲಿಕೆ
135 ಪ್ರಶ್ನೆಗಳ ಪೈಕಿ 133 ಕ್ಕೆ ಸರ್ಕಾರದಿಂದ ಉತ್ತರ
ಒಟ್ಟಿನಲ್ಲಿ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತೆ ಅನ್ನೋ ನಿರೀಕ್ಷೆ ಬೆಳಗಾವಿ ಅಧಿವೇಶನದಲ್ಲಿ ಹುಸಿಯಾಯ್ತು. ರಾಜಕೀಯ ವಿಚಾರಗಳೇ ಇಡೀ ಅಧಿವೇಶನವನ್ನು ನುಂಗಿ ಹಾಕ್ತು. ಸುವರ್ಣಸೌಧದಲ್ಲಿ ಚರ್ಚೆಯಾಗಿ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತೆ ಅನ್ನೋ ಉತ್ತರ ಕರ್ನಾಟಕದವರ ಆಸೆಗೆ ತಣ್ಣೀರು ಎರಚಿದಂತೆ ಆಗಿದೆ.
