ಉದ್ಯಮ ಸ್ನೇಹಿ ಸರಳೀಕರಣ ರಾಜ್ಯಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ್ದು, ನಂಬರ್ 1 ಸ್ಥಾನವನ್ನು ಕಳೆದುಕೊಂಡಿರುವ ಗುಜರಾತ್ 3ನೇ ಸ್ಥಾನಕ್ಕೆ ಕುಸಿದಿದೆ.

ನವದೆಹಲಿ: ವ್ಯವಹಾರ ನಡೆಸಲು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ತುಂಬಾ ಉತ್ತಮವಾಗಿದೆ. ಹಾಗಾಗಿ ವ್ಯವಹಾರ ನಡೆಸಲು ಅನುಕೂಲಕರವಾದ ಉತ್ತಮ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರ ಟಾಪ್ ಒನ್ ಹಾಗೂ ತೆಲಂಗಾಣ 2ನೇ ಸ್ಥಾನವನ್ನು ಅಲಂಕರಿಸಿದ್ದರೆ, ಕರ್ನಾಟಕ 13ನೇ ಸ್ಥಾನ ಪಡೆಯುವ ಮೂಲಕ ರಾಂಕಿಂಗ್ ಪಟ್ಟಿಯಲ್ಲಿ ಕುಸಿತ ಕಂಡಿದೆ.

ಉದ್ಯಮ ಸ್ನೇಹಿ ಸರಳೀಕರಣ ರಾಜ್ಯಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ್ದು, ನಂಬರ್ 1 ಸ್ಥಾನವನ್ನು ಕಳೆದುಕೊಂಡಿರುವ ಗುಜರಾತ್ 3ನೇ ಸ್ಥಾನಕ್ಕೆ ಕುಸಿದಿದೆ.

ಅದೇ ರೀತಿ 2015ರಲ್ಲಿ 9ನೇ ಸ್ಥಾನದಲ್ಲಿದ್ದ ಕರ್ನಾಟಕ 13ನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯಗಳ ರಾಂಕಿಂಗ್ ಪಟ್ಟಿಯಲ್ಲಿ ಆಂಧ್ರಪ್ರದೇಶ ಒಂದನೇ ಸ್ಥಾನ ಹಾಗೂ ತೆಲಂಗಾಣ 2ನೇ ಸ್ಥಾನ ಪಡೆದಿದೆ.