ಕರ್ನಾಟಕ ಅಂದರೆ ಹಾಗೆ ಯಾವುದಾದರೂ ಒಂದು ಸುದ್ದಿಯಿಂದ ವಿಶ್ವದ ಗಮನಸೆಳೆಯುವುದರಲ್ಲಿ ಎತ್ತಿದ ಕೈ. ಈ ಬಾರಿ ಕರ್ನಾಟಕ ಹಾಗೆ ದೇಶದಲ್ಲೇ ಫೇಮಸ್ ಆಗಿದ್ದಕ್ಕೆ ಕಾರಣ ಏನು ಎನ್ನುವುದನ್ನು ಕೇಳಿದರೆ ಬೆಚ್ಚಿ ಬೀಳ್ತೀರ. ಕರ್ನಾಟಕಕ್ಕೆ ದೇಶದಲ್ಲೇ ಪ್ರಥಮ ಸ್ಥಾನ ಸಿಕ್ಕಿದ್ದು ಯಾವುದ್ರಲ್ಲಿ ಗೊತ್ತಾ ಇಲ್ಲಿದೆ ನೋಡಿ ಉತ್ತರ.

ಬೆಂಗಳೂರು(ಎ.29): ಕರ್ನಾಟಕ ಅಂದರೆ ಹಾಗೆ ಯಾವುದಾದರೂ ಒಂದು ಸುದ್ದಿಯಿಂದ ವಿಶ್ವದ ಗಮನಸೆಳೆಯುವುದರಲ್ಲಿ ಎತ್ತಿದ ಕೈ. ಈ ಬಾರಿ ಕರ್ನಾಟಕ ಹಾಗೆ ದೇಶದಲ್ಲೇ ಫೇಮಸ್ ಆಗಿದ್ದಕ್ಕೆ ಕಾರಣ ಏನು ಎನ್ನುವುದನ್ನು ಕೇಳಿದರೆ ಬೆಚ್ಚಿ ಬೀಳ್ತೀರ. ಕರ್ನಾಟಕಕ್ಕೆ ದೇಶದಲ್ಲೇ ಪ್ರಥಮ ಸ್ಥಾನ ಸಿಕ್ಕಿದ್ದು ಯಾವುದ್ರಲ್ಲಿ ಗೊತ್ತಾ ಇಲ್ಲಿದೆ ನೋಡಿ ಉತ್ತರ.

ಸರ್ಕಾರಿ ಅಧಿಕಾರಗಳಿಗೆ ಕಾಸಿಲ್ಲ ಅಂದರೆ ಕಣ್ಣೇ ಕಾಣಲ್ಲ ಎನ್ನುವ ಮಾತಿತ್ತು. ಆದರೆ ಕರ್ನಾಟಕ ಆ ಮಾತನ್ನು ಸಾಭೀತು ಮಾಡಿದೆ. ಹೌದು ಈ ಸುದ್ದಿ ಕರ್ನಾಟಕದ ಪಾಲಿಗೆ ಕಹಿ ಅನಿಸಿದರು ಅಕ್ಷರ ಸಹ ಸಾಬೀತು ಮಾಡಿದ್ದು ದೆಹಲಿಯ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ನಡೆಸಿರುವ ಸಮೀಕ್ಷೆ. ದೇಶದ 20 ರಾಜ್ಯಗಳ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ಈ ಸತ್ಯ ಬಹಿರಂಗವಾಗಿದೆ.

ಕಳೆದ ವರ್ಷ ಅತಿ ಹೆಚ್ಚು ಲಂಚ ಪಡೆದ ರಾಜ್ಯಗಳು

-ಕರ್ನಾಟಕ - ಶೇ 77 - ನಂ - 1ಸ್ಥಾನ

-ಆಂಧ್ರಪ್ರದೇಶ - ಶೇ 74 - ನಂ - 2ಸ್ಥಾನ

-ತಮಿಳುನಾಡು - ಶೇ 68 - ನಂ - 3ಸ್ಥಾನ

-ಮಹಾರಾಷ್ಟ್ರ - ಶೇ 57 - ನಂ - 4ಸ್ಥಾನ

-ಜಮ್ಮು-ಕಾಶ್ಮೀರ - ಶೇ 44 - ನಂ - 5ಸ್ಥಾನ

-ಪಂಜಾಬ್ - ಶೇ 42 - ನಂ - 6ಸ್ಥಾನ

2016ರಲ್ಲಿ ಒಡಿಶಾ ಶೇ 68ರಷ್ಟು ಲಂಚ ಪಡಯುವ ರಾಜ್ಯವಾಗಿ ಪ್ರಥಮ ಸ್ಥಾನದಲ್ಲಿ ಇತ್ತು. ಕರ್ನಾಟಕ ಎರಡನೇ ಸ್ಥಾನ ಪಡೆದಿತ್ತು. ಆದ್ರೆ ಈ ಬಾರಿ ಕರ್ನಾಟಕ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನ ಪಡೆರುವುದು ದುರಂತದ ಸಂಗತಿ.

ಯಾವ ಇಲಾಖೆ ಲಂಚಕ್ಕೆ ಫೇಮಸ್

-ಭೂ ದಾಖಲೆ ಇಲಾಖೆ - ಪ್ರಥಮ ಸ್ಥಾನ

-ವಸತಿ ಹಾಗೂ ಪೊಲೀಸ್ ಇಲಾಖೆ - ಎರಡನೇ ಸ್ಥಾನ

-ಶಾಲಾ ಪ್ರವೇಶ ವಿಭಾಗ - ಮೂರನೇ ಸ್ಥಾನದಲ್ಲಿದೆ

ಒಟ್ಟಿನಲ್ಲಿ ರಾಜ್ಯಕ್ಕೆ ಇಂಥದೊಂದು ವಿಚಾರದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಸಿಗುತ್ತೆ ಅಂದ್ರೆ ಇದಕ್ಕಿಂತ ದುರಾದೃಷ್ಟಕರ ಸುದ್ದಿ ಬೇರೊಂದಿಲ್ಲ ಕಾಣುತ್ತೆ.