Asianet Suvarna News Asianet Suvarna News

ಎಚ್ಡಿಕೆ, ಬಿಎಸ್ವೈ ಬಿಟ್ಟು ಸಿಎಂ ರೇಸ್ ನಲ್ಲಿದ್ದ ಅಸಮಾನ್ಯ ಪುರುಷ ಯಾರು?

ಈತ ಯಾವುದೇ ಕ್ಷೇತ್ರದ ಎಂ ಎಲ್ ಎ ಅಲ್ಲ.. ಈತನ ಬಳಿ ಶಾಸಕರ ಬೆಂಬಲದ ಪಟ್ಟಿಯೂ ಇಲ್ಲ.. ಆದರೆ ತಾನು ಮುಖ್ಯಮಂತ್ರಿಯಾಗಬೇಕು ಅದಕ್ಕಾಗಿ ನನ್ನನ್ನು ಸರಕಾರ ರಚಿಸಲು ಆಗಮಿಸುವಂತೆ ಕೋರಲು ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಕೂಡ ಸಲ್ಲಿಕೆ ಮಾಡಿದ್ದರು! ಈಗೇನಾಯ್ತು ಮುಂದೆ ಓದಿ...
 

Karnataka High court dismis Harishchandra Gowda PIL

ಬೆಂಗಳೂರು (ಜು.6] ಇದೊಂದು ವಿಚಿತ್ರ ಸುದ್ದಿ. ಆದರೆ ನಿಜಕ್ಕೂ ಹೀಗೆಲ್ಲಾ ಆಗುತ್ತಾ ಎಂದು ಒಂದು ಕ್ಷಣ ಯೋಚನೆ ಮಾಡುವ ಸುದ್ದಿಯೂ ಹೌದು. ತನ್ನನ್ನು ಸಿಎಂ ಮಾಡಿ ಎಂದು ವ್ಯಕ್ತಿಯೊಬ್ಬರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ಕತೆ. ತೀರ್ಥಹಳ್ಳಿಯ ರೈತ ಕಾಂಗ್ರೆಸ್ ಕಾರ್ಯಕರ್ತ ಆರ್.ಹರಿಶ್ಚಂದ್ರ ಗೌಡ ಸಲ್ಲಿಸಿದ್ದ ತಮ್ಮನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಈ ಅರ್ಜಿ ವಿಚಾರಣೆಯೂ ನಡೆಯಿತು. ಖುದ್ದು ಹರಿಶ್ಚಂದ್ರ ಗೌಡ ಅವರೇ ವಾದ ಮಂಡಿಸಿದ್ದು ವಿಶೇಷ. ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ವಿಸ್ ಬ್ಯಾಂಕಿನಲ್ಲಿ ಸಾವಿರಾರು ಕೋಟಿ ಹಣ ಇರಿಸಿದ್ದಾರೆ. ನಾನು ಸಿಎಂ ಆದರೆ ಆ ಹಣವನ್ನು ತಂದು ರಾಜ್ಯದ ರೈತರ ಸಾಲ ತೀರಿಸುತ್ತೇನೆ. ನಾನು ಸಿಎಂ ಆಗಲು ಕೋರಿದ ಮನವಿಯನ್ನು ರಾಜ್ಯಪಾಲರು ಪರಿಗಣಿಸಿಲ್ಲ. ಹಾಗಾಗಿ ನನ್ನ ಮನವಿಯನ್ನು ರಾಜ್ಯಪಾಲರಿಗೆ ಪರಿಗಣಿಸುವಂತೆ ನಿರ್ದೇಶನ ನೀಡಿ ಎಂದು ನ್ಯಾಯಾಲಯಕ್ಕೆ ಗೌಡರು ಅರ್ಜಿ ಸಲ್ಲಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಸದ್ಯದ ಕತೆ!

ನಾನು 42 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಿದ್ದೇನೆ. ಸರ್ಕಾರ ರಚನೆಗೆ ಅವಕಾಶ ಕೋರಿ ನಾನು ರಾಜ್ಯಪಾಲರಿಗೆ ಪತ್ರ ಬರೆದಿದ್ದೆ. ಆದರೆ ಅದನ್ನು ರಾಜ್ಯಪಾಲರು ಪರಿಗಣಿಸಿಲ್ಲ. ರಾಜ್ಯಪಾಲರಿಗೆ ‌ ನಿರ್ದೇಶನ ನೀಡಿ ಶಾಸಕರು ನನ್ನ ಮನೆ ಬಳಿ ಬಂದು ನನಗೆ ಬೆಂಬಲ ನೀಡುತ್ತಾರೆ. ಬೇಕಿದ್ದರೆ ನೀವು ಆದೇಶ ಮಾಡಿ ನೀಡಿ ಎಂದು ಹೈಕೋರ್ಟ್ ಗೆ ವಿಚಿತ್ರ ಮನವಿ ಸಲ್ಲಿಸಿದ್ದರು.

ದೇವೇಗೌಡರ ಜಮೀನು ರೈತರಿಗೆ ಹಂಚುತ್ತೇನೆ: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಮೂಲ ಜಮೀನು 3 ಎಕರೆ 7 ಗುಂಟೆ. ಆದರೆ, ಅವರ ಬಳಿ ಇವತ್ತು 3700 ಎಕರೆ ಜಮೀನಿದೆ. ನಾನು ಮುಖ್ಯಮಂತ್ರಿಯಾದರೆ ದೇವೇಗೌಡರ ಅಷ್ಟೂ ಜಮೀನನ್ನು ಹಾಸನದ ರೈತರಿಗೆ ಹಂಚುತ್ತೇನೆ ಎಂದು ಗೌಡರು ಹೇಳಿದ್ದರು.

ಬಜೆಟ್ ದಿನವೇ ಡಿಕೆಶಿ ಅಜ್ಜಯ್ಯನ ಬಳಿ ಹೋಗಿದ್ದು ಯಾಕೆ?

ಬಾಬ್ರಿ ಮಸೀದಿ ಕೆಡವಿದ್ದು ನರಸಿಂಹರಾವ್! ಬಾಬರಿ ಮಸೀದಿ ಕೆಡವಿದ್ದು ಆರ್ ಎಸ್ ಎಸ್ ಕಾರ್ಯಕರ್ತರಲ್ಲ. ಅಂದಿನ ಪ್ರಧಾನಿ ಪಿ.ವಿ ನರಸಿಂಹ ರಾವ್ ಎಂದು ಗೌಡರು ಮನವಿಯಲ್ಲಿ ಉಲ್ಲೇಖ ಮಾಡಿದ್ದರು. ಈ ಪಿಐಎಲ್ ನ್ನು ವಿಚಾರಣೆ ಮಾಡಿದ ಹೈಕೋರ್ಟ್, ಇದಕ್ಕೆ ಯಾವುದೇ ಆಧಾರವಿಲ್ಲ ಎಂದು ಹೇಳಿ ಅರ್ಜಿ ವಜಾ ಮಾಡಿದೆ.

ರಾಷ್ಟ್ರಪತಿ ಚುನಾವಣೆಗೂ ಸ್ಪರ್ಧಿಸಿದ್ದ ಗೌಡರು:
ಹರಿಶ್ಚಂದ್ರ ಗೌಡ ಹಿಂದೆ ರಾಮನಾಥ್ ಕೋವಿಂದ್ ವಿರುದ್ಧ ರಾಷ್ಟ್ರಪತಿ ಚುನಾವಣೆಗೂ ಸ್ಪರ್ಧೆ ಮಾಡಿದ್ದರು. ತಾವು ಕಾಲಜ್ಞಾನಿ ಎಂದು ಹೇಳಿಕೊಂಡು ರಾಜಕಾರಣದ ಭವಿಷ್ಯವನ್ನು ಅಂಗೈನಲ್ಲಿ ಹೇಳಿದ್ದರು.

Follow Us:
Download App:
  • android
  • ios