ಬೆಂಗಳೂರು[ಆ.1] ಒಂದು ಕಡೆ ಆಗಸ್ಟ್2 ರಂದು ಕರೆ ನೀಡಿದ್ದ ಬಂದ್ ಹಿಂದಕ್ಕೆ ಪಡೆಯಲಾಗಿದ್ದರೂ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗೋದನ್ನು ತಡೆಯಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಇದಕ್ಕೆ ಪ್ರಾಥಮಿಕ ಹಂತ ಎನ್ನುವಂತೆ ಉತ್ತರಕರ್ನಾಟಕ ಸಮಸ್ಯೆ ಅರಿಯಲು ತಜ್ಞರ ಸಮಿತಿ ರಚನೆ ಮಾಡುವ ಸಾಧ್ಯತೆ ಇದೆ.

ಈ ಬಗ್ಗೆ ಗುರುವಾರ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿಗಂಭೀರ ಚರ್ಚೆ ನಡೆಯಲಿದೆ. ತಜ್ಞರ ಸಮಿತಿಯ ಮೂಲಕ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಸಮಗ್ರ ಚರ್ಚೆ ನಡೆಯಲಿದೆ. ಆದರೆ ತಜ್ಞರ ಸಮಿತಿ ರಚನೆ ಮಾಡಿ ಹೋರಾಟಗಾರರ ಬಾಯಿಮುಚ್ಚಿಸುವ ತಂತ್ರ ರಾಜ್ಯ ಸರಕಾರದಿಂದ ನಡೆಯುತ್ತಿದೆಯೇ ಎಂಬ ಅನುಮಾನ ಸಹ ಮೂಡಿದೆ.

ಬೆಳಗಾವಿಯನ್ನು ಎರಡನೇಯ ರಾಜಧಾನಿಯನ್ನಾಗಿ ಮಾಡುವ ಬಗ್ಗೆಯೂ ಅಧ್ಯಯನ ಮಾಡಲಾಗುಗುತ್ತದೆಯೇ? ಪ್ರಮುಖ ನಿಗಮ ಮಂಡಳಿಗಳನ್ನು ಬೆಳಗಾವಿಯ ಸುವರ್ಣಸೌಧಕ್ಕೆ ವರ್ಗಾಯಿಸುವ ಲೆಕ್ಕಾಚಾರ ಇದೆಯೇ? ಅಥವಾ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸರಕಾರ ಈ ತಂತ್ರದ ಮೊರೆ ಹೋಗುತ್ತಿದೆಯೇ ಎಂಬುದು ಸದ್ಯಕ್ಕೆ ಅರ್ಥವಾಗಿಲ್ಲ.