ಬೆಂಗಳೂರು (ಆ.02): ಮೈತ್ರಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿದೆ.

ಈ ಹಿಂದಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ,  ಏಕಾಏಕಿ ಅಲೋಕ್ ಕುಮಾರ್ ಅವರಿಗೆ  ಪ್ರಮೋಷನ್ ನೀಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಿತ್ತು. ಆದ್ರೆ ಇದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಅಪಸ್ಪರ ಕೇಳಿಬಂದಿದ್ದವು. 

ಬೆಳಗ್ಗೆ ಸಭೆ, ಸಂಜೆ ವೇಳೆಗೆ 11 IPS ಅಧಿಕಾರಿಗಳ ದಿಢೀರ್ ಎತ್ತಂಗಡಿ

ಇದೀಗ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಇಂದು (ಶುಕ್ರವಾರ) ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

45 ದಿನಗಳ ಹಿಂದೆಯಷ್ಟೇ ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ ಆಗಿ ಧಿಕಾರ ಸ್ವೀಕರಿಸಿದ್ದ ಅಲೋಕ್ ಕುಮಾರ್ ಸ್ಥಾನಕ್ಕೆ ಮತ್ತೊಬ್ಬ ಹಿರಿಯ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ನೇಮಿಸಿದೆ.

ಅಲೋಕ್ ಕುಮಾರ್ ಕಳೆದ ಜೂನ್ 17ರಂದು ಕಮಿಷನರ್ ಹುದ್ದೆ ಅಲಂಕರಿಸಿದ್ದರು. ಇನ್ನು ಅಲೋಕ್ ಕುಮಾರ್ ಅವರನ್ನು ರಾಜ್ಯ ಮೀಸಲು ಪೊಲೀಸ್ ಪಡೆಯ (KSRP) ADGPಯಾಗಿ ವರ್ಗಾಯಿಸಿದೆ. ಈ ಹಿಂದೆ ಭಾಸ್ಕರ್ ರಾವ್ ಇದೇ ಹುದ್ದೆಯಲ್ಲಿದ್ದರು.

ನಿನ್ನೆ (ಗುರುವಾರ) ಅಷ್ಟೇ ಯಡಿಯೂರಪ್ಪ ಸರ್ಕಾರ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.