ಬೆಂಗಳೂರು, [ಆ.05]: ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರಿದಿದೆ. ರವಿ ಡಿ ಚನ್ನಣ್ಣನವರ್ ಸೇರಿದಂತೆ ಒಟ್ಟು 10 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು [ಸೋಮವಾರ] ಆದೇಶ ಹೊರಡಿಸಿದೆ.

ಶುರುವಾಯ್ತು ವರ್ಗಾವಣೆ ಪರ್ವ: ಗುರುವಾರ 11, ಶುಕ್ರವಾರ 6 IPS ಅಧಿಕಾರಿಗಳ ಎತ್ತಂಗಡಿ

 ಖಡಕ್ ಐಪಿಎಸ್ ಅಧಿಕಾರಿ ರವಿ  ಡಿ ಚನ್ನಣ್ಣವರ್ ಅವರನ್ನು ಬೆಂಗಳೂರು ಪಶ್ಚಿಮ ಡಿಸಿಪಿಯಿಂದ ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ ವರ್ಗಾಯಿಸಲಾಗಿದೆ. ಮೊನ್ನೇ ಅಷ್ಟೇ 17ಐಪಿಎಸ್ ಅಧಿಕಾರಗಳನ್ನ ಎತ್ತಂಗಡಿ ಮಾಡಲಾಗಿತ್ತು. ಇಂದು ಮತ್ತೆ ಏಳು ಐಪಿಎಸ್ ಅಧಿಕಾರಿಗಳನ್ನು ಟ್ರಾನ್ಸ್ ಫರ್ ಮಾಡಲಾಗಿದೆ. 

1. ಸಿಸಿಬಿ ಡಿಸಿಪಿ ಗಿರೀಶ್ ಅವರನ್ನು ಕೆಎಸ್ ಆರ್ ಪಿ ಕಮಾಂಡೆಂಟ್ ಆಗಿ ವರ್ಗ.
2. ರವಿ  ಡಿ ಚನ್ನಣ್ಣವರ್ ಅವರನ್ನು ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ ವರ್ಗಾಯಿಸಲಾಗಿದೆ.
3. ಡಿಐಜಿ ರವಿಕಾಂತೇಗೌಡರನ್ನ ಸಂಚಾರಿ ಜಂಟಿ ಆಯುಕ್ತರಾಗಿ ನೇಮಕ.
4. ಕ್ರೈಂ ಎಡಿಜಿ ಆಗಿ ಎ. ಪರಮಶಿವ ಮೂರ್ತಿ ವರ್ಗ.
5. ಅಬ್ದಲ್ ಸಲೀಂ ಅವರನ್ನು ಎಡಿಜಿ ಆಡಳಿತ ವಿಭಾಕ್ಕೆ ಟ್ರಾನ್ಸ್ ಫರ್.
6. ಮಂಗಳೂರು ಆಯುಕ್ತರಾಗಿ ಪಿ.ಎಸ್ ಹರ್ಷ ನೇಮಕ. 
7. ಕುಲದೀಪ್ ಕುಮಾರ್ ಸಿಸಿಬಿ ಡಿಸಿಪಿಯಾಗಿ ವರ್ಗಾವಣೆ
8. ಬಿ ದಯಾನಂದ ಅಪರಾಧ ತನಿಖಾ ದಳದ ಐಜಿಪಿಯಾಗಿ ವರ್ಗಾವಣೆ
9. ಹರಿಶೇಖರನ್, ರಿಸರ್ವ್ ಪೊಲೀಸ್ ದಳದ ಐಜಿಪಿಯಾಗಿ ವರ್ಗ
10. ಗಿರಿ,  ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ