Asianet Suvarna News Asianet Suvarna News

ಶುರುವಾಯ್ತು ವರ್ಗಾವಣೆ ಪರ್ವ: ಗುರುವಾರ 11, ಶುಕ್ರವಾರ 6 IPS ಅಧಿಕಾರಿಗಳ ಎತ್ತಂಗಡಿ

ನಿನ್ನೆ (ಗುರುವಾರ) ಅಷ್ಟೇ 11 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ ಮತ್ತೆ ಇಂದು (ಶುಕ್ರವಾರ) 6 ಐಪಿಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿದೆ.

Karnataka Govt transfers 6 ips officers
Author
Bengaluru, First Published Aug 2, 2019, 7:11 PM IST

ಬೆಂಗಳೂರು (ಆ.02):  ರಾಜ್ಯ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪರ್ವ ಮುಂದುವರಿದಿದೆ. ಆಗಸ್ಟ್ 01ರಂದು 11 ಐಪಿಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿದ್ದ ಬಿಎಸ್‌ವೈ ನೇತೃತ್ವದ ಸರ್ಕಾರ, ಇಂದು (ಶುಕ್ರವಾರ ಮತ್ತೆ 6 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅದೇಶ ಹೊರಡಿಸಿದೆ.

ಬೆಂಗ್ಳೂರು ಪೊಲೀಸ್ ಕಮೀಷನರ್ ಅಲೋಕ್ ಕುಮಾರ್ ಎತ್ತಂಗಡಿ

ಪ್ರಮುಖ ಅಂಶ ಅಂದ್ರೆ ಬಿಎಸ್‌ವೈ ಸರ್ಕಾರ ಹೆಚ್ಚು ಪೊಲೀಸ್ ಇಲಾಖೆ ಮೇಲೆ ಕಣ್ನಿಟ್ಟಿದೆ. ಯಾಕಂದ್ರೆ ನಿನ್ನೆ 11 ಇಂದು 6 ಪೊಲೀಸ್ ಅಧಿಕಾರಿಗಳನ್ನೇ ಟ್ರಾನ್ಸ್‌ಫರ್ ಮಾಡಿದೆ. 

ಬೆಳಗ್ಗೆ ಸಭೆ, ಸಂಜೆ ವೇಳೆಗೆ 11 IPS ಅಧಿಕಾರಿಗಳ ದಿಢೀರ್ ಎತ್ತಂಗಡಿ

ಬೆಂಗಳೂರು ಪೊಲೀಸ್ ಕಮೀಷನರ್ ಸೇರಿದಂತೆ ಒಟ್ಟು 6 IPS ಐಪಿಎಸ್ ಅಧಿಕಾರಿಗಳನ್ನು ಟ್ರಾನ್ಸ್‌ಫರ್ ಮಾಡಲಾಗಿದೆ. ಅದರ ಪಟ್ಟಿ ಇಂತಿದೆ.

* ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ರಾಜ್ಯ ಮೀಸಲು ಪೊಲೀಸ್ ಪಡೆಯ (KSRP) ADGPಯಾಗಿ ವರ್ಗಾಯಿಸಿದೆ.

* ಭಾಸ್ಕರ ರಾವ್ ಅವರನ್ನು ಬೆಂಗಳೂರು ಪೊಲೀಸ್ ಆಯುಕ್ತರನ್ನಾಗಿ ಟ್ರಾನ್ಸ್‌ಫರ್ ಮಾಡಲಾಗಿದೆ.

* ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಐಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ಆಡಳಿತ ವಿಭಾಗದ ಐಜಿಪಿಯನ್ನಾಗಿ ವರ್ಗಾಯಿಸಲಾಗಿದೆ. 

* ಅಗ್ನಿಶಾಮಕದಳದ ಡಿಐಜಿಪಿ ಬಿ.ಆರ್. ರವಿಕಾಂತೇಗೌಡ ಅವರನ್ನು ಬೆಂಗಳೂರು ಪಶ್ಚಿಮ ವಿಭಾಗದ ಜಂಟಿ ಆಯುಕ್ತರನ್ನಾಗಿ ನೇಮಿಸಲಾಗಿದೆ.

* ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್ ಅವರನ್ನು ಅಗ್ನಿಶಾಮಕ ದಳದ ಐಜಿಪಿಯನ್ನಾಗಿ ವರ್ಗಾಯಿಸಲಾಗಿದೆ. 

* ಡಿ. ದೇವರಾಜು ಅವರನ್ನು ಸಿಐಡಿಯ ಎಸ್‌ಪಿಯನ್ನಾಗಿ, ಅಶ್ವಿನಿ ಅವರನ್ನು ಗುಪ್ತಚರದಳದ ಡಿಸಿಪಿಯಾಗಿ ಮತ್ತು ಆರ್. ಚೇತನ್ ಅವರನ್ನು ಕರಾವಳಿ ಕಾವಲು ಪಡೆಯ ಎಸ್ಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

Follow Us:
Download App:
  • android
  • ios