Asianet Suvarna News Asianet Suvarna News

ರಾಜ್ಯ ಸರ್ಕಾರದಿಂದ ಮತ್ತೊಂದು ಸಾಲ ಮನ್ನಾ ಬಂಪರ್?

ಸಿಎಂ ಕುಮಾರಸ್ವಾಮಿ ಸರ್ಕಾರ ಇದೀಗ ಮತ್ತೊಂದು  ಗುಡ್ ನ್ಯೂಸ್ ನೀಡಲು ಸಜ್ಜಾಗಿದೆ.  ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾಡಿರುವ ಲೋನ್ ಮನ್ನಾ ಮಾಡುವ ಬಗ್ಗೆ ಶಿಘ್ರದಲ್ಲೇ ತೀರ್ಮಾನ ಮಾಡುವುದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. 

Karnataka Govt to Waive more crop loans
Author
Bengaluru, First Published Aug 12, 2018, 7:58 AM IST

ಕೆ.ಆರ್‌.ನಗರ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ .27 ಸಾವಿರ ಕೋಟಿ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಮುಂದಿನ ಗುರುವಾರ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ತಾಲೂಕಿನ ಚುಂಚನಕಟ್ಟೆಯಲ್ಲಿ ಶನಿವಾರ ರಾತ್ರಿ ಆರಂಭವಾದ ಎರಡು ದಿನಗಳ ಕಾವೇರಿ ಜಲಪಾತೋತ್ಸವಕ್ಕೆ ಚಾಲನೆ ನೀಡಿದ ಅವರು, ಮುಂದಿನ ತಿಂಗಳಿನಿಂದ ಪ್ರತಿ ತಿಂಗಳು ರಾಜ್ಯದ 30 ಜಿಲ್ಲೆಗಳ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ರೈತರೊಂದಿಗೆ ಇಡೀ ದಿನ ಕಾಲ ಕಳೆದು ಅವರ ಸಮಸ್ಯೆ ಸಂಕಷ್ಟಆಲಿಸುತ್ತೇನೆ. ರಾಜ್ಯದ 75 ಲಕ್ಷ ರೈತ ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಕೈಬಿಡಬೇಕು. ಎಲ್ಲಾ ಕೃಷಿ ಸಾಲ ತೀರಿಸಲು ನಾನಿದ್ದೇನೆ ಎಂದು ಮನವಿ ಮಾಡಿದರು.

ರೈತರ ಪರವಾಗಿ ಸಮ್ಮಿಶ್ರ ಸರ್ಕಾರ ಕೆಲಸ ಮಾಡುತ್ತಿದ್ದು ನಿಮ್ಮ ಕುಟುಂಬದಲ್ಲಿ ಯಾರೇ ಆತ್ಮಹತ್ಯೆ ಮಾಡಿಕೊಂಡರೂ ನನ್ನ ಮನೆಯವರನ್ನು ಕಳೆದುಕೊಂಡಂತಾಗುತ್ತಿದೆ. ನನ್ನನ್ನು ನಂಬಿ ಉಸಿರಿರುವವರೆಗೂ ನಿಮ್ಮ ಜತೆಗೆ ಇರುತ್ತೇನೆ ಎಂದರು.

ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಭಾಗಗಳಿಗೂ ಉತ್ತಮ ಮಳೆಯಾಗಿ ಸಮಸ್ತ ರೈತರು ಸಂತಸದಿಂದ ಬದುಕುವಂತಾಗಬೇಕು ಇಂತಹ ವಾತಾವರಣ ಸೃಷ್ಟಿಯಾಗಲಿ ಎಂದು ನಾನು ಚುಂಚನಕಟ್ಟೆಶ್ರೀರಾಮನಲ್ಲಿ ಬೇಡುತ್ತೇನೆ ಎಂದು ತಿಳಿಸಿದರು.

Follow Us:
Download App:
  • android
  • ios