ಬೆಂಗಳೂರು :  ರಾಜ್ಯಾದ್ಯಂತ ತೀವ್ರವಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಕ್ಷಣ ಪರಿಹಾರ ಒದಗಿಸಲು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಸಾರ್ವಜನಿಕರು ಈ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆಗೆ ಪರಿಹಾರ ಪಡೆಯಬಹುದು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಕುಡಿಯುವ ನೀರಿನ ಸಮಸ್ಯೆಗಳ ಕುರಿತಂತೆ ಬರುವ ದೂರುಗಳಿಗೆ ತಕ್ಷಣವೇ ಸ್ಪಂದಿಸುವಂತೆ ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಲು ಅನುವಾಗುವಂತೆ ಸಹಾಯವಾಣಿ ವ್ಯವಸ್ಥೆ ಮಾಡಿದ್ದೇವೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್ಲ ಜಿಲ್ಲೆ ಹಾಗೂ 176 ತಾಲೂಕುಗಳ ಸಹಾಯವಾಣಿ ದೂರವಾಣಿ ಸಂಖ್ಯೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ವೆಬ್‌ಸೈಟ್‌ rdpr.kar.nic.in ವಿಳಾಸದಲ್ಲೂ ಪ್ರಕಟಿಸಲಾಗಿದೆ.

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕಂದಾಯ ಇಲಾಖೆ ಪ್ರತಿ ತಾಲೂಕಿಗೆ ಎರಡು ಕೋಟಿ ರು.ನಂತೆ 324 ಕೋಟಿ ರು. ಬಿಡುಗಡೆ ಮಾಡಿದ್ದರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಈಗಾಗಲೇ 2600 ಕೋಟಿ ರು. ನೀಡಿದ್ದು, ಹೆಚ್ಚುವರಿಯಾಗಿ 201 ಕೋಟಿ ರು. ಬಿಡುಗಡೆ ಮಾಡಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಎರಡು ದಿನದಲ್ಲಿ ನೀರು ಪೂರೈಕೆ ಮಾಡಲು ಸರ್ಕಾರ ಸೂಚಿಸಿದೆ. ಅಲ್ಲದೇ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಜಿಲ್ಲಾಧಿಕಾರಿ ಅನುಮತಿ ನೀಡಬೇಕು ಎಂಬ ನಿಯಮವನ್ನು ಸಡಿಲಗೊಳಿಸಿ ತಹಶೀಲ್ದಾರ್‌ಗೆ ಅಧಿಕಾರ ನೀಡಲಾಗಿದೆ.

ಪ್ರಸ್ತುತ 2,575 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ಕಂಡುಬಂದಿದ್ದು, ಈ ಪೈಕಿ 1,324 ಗ್ರಾಮಗಳಿಗೆ 2,177 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. 1,647 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು 1,251ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಕುಡಿಯುವ ನೀರು ಇಲ್ಲವೇ ? ಹಾಗಾದ್ರೆ ಈ ನಂಬರ್ ಗೆ ಕರೆ ಮಾಡಿ

ಜಿಲ್ಲಾವಾರು ಸಹಾಯವಾಣಿ ಸಂಖ್ಯೆ: 

ಬಾಗಲಕೋಟೆ - 08354-220446, ಬೆಂಗಳೂರು - 080-26713944, ಬೆಂಗಳೂರು ಗ್ರಾಮಾಂತರ - 080-29781021, ಚಿಕ್ಕಬಳ್ಳಾಪುರ - 08156-270058, ಬೆಳಗಾವಿ - 0831-2420835, ಬಳ್ಳಾರಿ - 9535853159, ಬೀದರ್‌ - 9743452632, ವಿಜಯಪುರ - 08352-276378, 08352-277941, ಚಾಮರಾಜನಗರ - 08226-226054, ಚಿಕ್ಕಮಗಳೂರು - 18004251104, ಚಿತ್ರದುರ್ಗ 08194-234743, ದಕ್ಷಿಣ ಕನ್ನಡ - 0824-2220583, ದಾವಣಗೆರೆ - 08192-262126, ಧಾರವಾಡ- 0836-2441209, ಗದಗ - 08372-234364, ಕಲಬುರ್ಗಿ- 08472-278677, ಹಾಸನ - 18004251020, ಹಾವೇರಿ - 08375-237129, ಕೊಡಗು - 08272-221088, 08272-298845, ಕೋಲಾರ - 08152-241367, 08152-222331, ಕೊಪ್ಪಳ - 08539-221207, ಮಂಡ್ಯ - 08232-221443, ಮೈಸೂರು - 0821-2460495, ರಾಯಚೂರು - 08532-228591, ಶಿವಮೊಗ್ಗ - 08182-267226, ತುಮಕೂರು - 0816-2260202, ಉಡುಪಿ - 0820-2574879, ಉತ್ತರ ಕನ್ನಡ - 08382-226292, ರಾಮನಗರ - 080 -27271223, ಯಾದಗಿರಿ - 08473-253758, 08473-253805.