Asianet Suvarna News Asianet Suvarna News

ಕರ್ನಾಟಕ ಸರ್ಕಾರಿ ನೌಕರರಿಗೆ ‌ಗುಡ್ ನ್ಯೂಸ್..!

ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ‌ಸದ್ಯದಲ್ಲೇ ಸಿಗಲಿದೆ ಗುಡ್ ನ್ಯೂಸ್ | ರಾಜ್ಯದ ಎಲ್ಲ ಸರ್ಕಾರಿ‌ ನೌಕರರಿಗೂ ಸಿಗಲಿದೆ ಆರೋಗ್ಯ ಭಾಗ್ಯ ಯೋಜನೆ ಪ್ರಯೋಜನೆ| ಆರೋಗ್ಯ ಭಾಗ್ಯ ಯೋಚನೆ ವಿಸ್ತರಣೆಗೆ ವಿವರವಾದ ಪ್ರಸ್ತಾವನೆ ಸಲ್ಲಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ ಸಿಎಂ.

Karnataka Govt employees May soon gets Arogya Bhagya Yojane
Author
Bengaluru, First Published Aug 5, 2019, 9:31 PM IST

ಬೆಂಗಳೂರು, [ಆ.05]: ರಾಜ್ಯದ ಎಲ್ಲ ಸರ್ಕಾರಿ‌ ನೌಕರರಿಗೂ ಆರೋಗ್ಯ ಭಾಗ್ಯ ಯೋಜನೆ ನೀಡಲು ಬಿ.ಎಸ್.ಯಡಿಯೂರಪ್ಪ ಸರ್ಕಾರ ನಿರ್ಧರಿಸಿದೆ.

ಸರ್ಕಾರಿ‌ ನೌಕರರು ಪಡೆದ ಚಿಕಿತ್ಸೆ ವೆಚ್ಚದ ಮರುಪಾವತಿ ವಿಳಂಬವಾಗ್ತಿತ್ತು. ಅನುದಾನದ ಕೊರತೆ ಹಿನ್ನಲೆ ವೈದ್ಯಕೀಯ ಚಿಕಿತ್ಸೆ ವೆಚ್ಚದ ಮರುಪಾವತಿ ಪಡೆಯೋದು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ  ಮರುಪಾವತಿ ವೆಚ್ಚದ ನಿಯಮಗಳಲ್ಲಿ ಬದಲಾವಣೆ ತರಬೇಕು ಎಂದು ಕರ್ನಾಟಕ ಸರ್ಕಾರಿ‌ ನೌಕರರ ಸಂಘ ಮನವಿ‌ ಮಾಡಿತ್ತು.

ಪೋಲೀಸ್ ಇಲಾಖೆಗೆ ಈಗಾಗಲೇ ಆರೋಗ್ಯ ಭಾಗ್ಯ ಯೋಜನೆಯ ಪ್ರಯೋಜನೆ ಸಿಗುತ್ತಿದೆ. ಅದನ್ನ ರಾಜ್ಯದ ಸರ್ಕಾರಿ ನೌಕರರಿಗೆ ವಿಸ್ತರಣೆ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

 ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ, ಆರೋಗ್ಯ ಭಾಗ್ಯ ಯೋಚನೆ ವಿಸ್ತರಣೆಗೆ ವಿವರವಾದ ಪ್ರಸ್ತಾವನೆ ಸಲ್ಲಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದು, ಶೀಘ್ರದಲ್ಲಿಯೇ ಜಾರಿಗೆ ತರುವ ಸಾಧ್ಯತೆಗಳಿವೆ.

Follow Us:
Download App:
  • android
  • ios