Asianet Suvarna News Asianet Suvarna News

9 IPS ಅಧಿಕಾರಿಗಳ ವರ್ಗಾವಣೆ: ಅಣ್ಣಾಮಲೈ ಜಾಗಕ್ಕೆ ರೋಹಿಣಿ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದ್ದು,  ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ರಾಜೀನಾಮೆಯಿಂದ ತೆರವಾಗಿದ್ದ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹುದ್ದೆಗೆ ಮಹಿಳಾ ಪೊಲೀಸ್ ಅಧಿಕಾರಿಯನ್ನು ನೇಮಿಸಲಾಗಿದೆ. 9 IPS ಅಧಿಕಾರಿಗಳ ವರ್ಗಾವಣೆ ಪಟ್ಟಿ ಈ ಕೆಳಗಿನಂತಿದೆ.

Karnataka government Transferred 9 IPS officers
Author
Bengaluru, First Published Jun 7, 2019, 10:38 PM IST

ಬೆಂಗಳೂರು, (ಜೂನ್ 07): ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದ್ದು, . 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 

ಶುಕ್ರವಾರ ಕರ್ನಾಟಕ ಸರ್ಕಾರ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಹಲವು ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ

ಪ್ರಮುಖವಾಗಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ರಾಜೀನಾಮೆಯಿಂದ ತೆರವಾಗಿದ್ದ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹುದ್ದೆಗೆ ಮಹಿಳಾ ಪೊಲೀಸ್ ಅಧಿಕಾರಿಯನ್ನು ನೇಮಿಸಲಾಗಿದೆ. 

ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆ.ಅಣ್ಣಾಮಲೈ ಜಾಗಕ್ಕೆ [ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ] ನೇಮಿಸಲಾಗಿದೆ. 

9 IPS ಅಧಿಕಾರಿಗಳ ವರ್ಗಾವಣೆ ಪಟ್ಟಿ.

1. ಚೇತನ್ ಸಿಂಗ್ ರಾಠೋಡ್-ಹಾಸನದಿಂದ ರಾಮನಗರಕ್ಕೆ ಎಸ್ಪಿಯಾಗಿ ವರ್ಗ.
2. ರಾಮನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ರಮೇಶ್ ಅವರನ್ನು ಬಿಡಿಎನ ವಿಶೇಷ ಟಾಸ್ಕ್ ಫೋರ್ಸ್‌ ಎಸ್‌ಪಿಯಾಗಿ ನೇಮಿಸಲಾಗಿದೆ.
3.ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌ ಅವರನ್ನು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ನೇಮಿಸಲಾಗಿದೆ.
4. ಕೆಜಿಎಫ್ ಎಸ್‌ಪಿಯಾಗಿದ್ದ ಕಾರ್ತಿಕ್ ರೆಡ್ಡಿ ಅವರನ್ನು ಕೋಲಾರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
5. ಚಾಮರಾಜನರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರನ್ನು ಬೆಂಗಳೂರಿನ ವೈರ್‌ ಲೆಸ್ ವಿಭಾಗದ ಎಸ್‌ಪಿಯಾಗಿ ನೇಮಿಸಲಾಗಿದೆ.
6. ರಾಯಚೂರು ಎಸ್‌ಪಿ ಡಿ.ಕಿಶೋರ್ ಬಾಬು ಅವರನ್ನು ಆತಂರಿಕ ಭದ್ರತೆ ವಿಭಾಗ, ಬೆಂಗಳೂರು ಎಸ್‌ಪಿಯಾಗಿ ನೇಮಿಸಲಾಗಿದೆ.
7. ಮಂಗಳೂರು ಡಿಸಿಆರ್‌ಇ ಎಸ್‌ಪಿಯಾಗಿದ್ದ ಸಿ.ಬಿ.ವೇದಮೂರ್ತಿ ಅವರನ್ನು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ. 
8. ಎ.ಎನ್.ಪ್ರಕಾಶ್ ಗೌಡ ಅವರನ್ನು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ. 
9. ಬೆಂಗಳೂರು ಸಿಐಡಿಯ ಎಸ್‌ಪಿ ಎಚ್‌.ಡಿ.ಆನಂದ್ ಕುಮಾರ್ ಅವರನ್ನು ಚಾಮರಾಜನರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ.

Follow Us:
Download App:
  • android
  • ios