Asianet Suvarna News Asianet Suvarna News

ಕೊಡಗು ನೆರೆ : ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ

ಕೊಡಗಿನಲ್ಲಿ ಕಂಡು ಕೇಳರಿಯದ ಜಲಪ್ರಳಯಕ್ಕೆ ಜನ ತತ್ತರಿಸಿದ್ದಾರೆ. ನೂರಾರು ಮನೆಗಳು ನೆಲಸಮಾಧಿಯಾಗಿದ್ದು ಗುಡ್ಡಗಳು ಕುಸಿಯುತ್ತಿವೆ. ವರುಣನ ರೌದ್ರಾವತಾರಕ್ಕೆ ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. 

Karnataka government announces Rs. 5 lakh compensation to the kin of deceased in Kodagu floods
Author
Bengaluru, First Published Aug 18, 2018, 7:50 PM IST

ಬೆಂಗಳೂರು[ಆ.18]: ಕೊಡಗು ನೆರೆಯಿಂದ ಮೃತರಾದವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ರಾಜ್ಯ ಸರ್ಕಾರ ಘೋಷಿಸಿದೆ.

ಕೊಡಗು ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರು ಸುವರ್ಣ ನ್ಯೂಸ್ .ಕಾಂ ಸೋದರ ಸಂಸ್ಥೆ ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ.  ಮನೆ ಕಳೆದುಕೊಂಡಿರುವ ಕುಟುಂಬಗಳಿಗೆ 2 ಲಕ್ಷ ರೂ. ನೀಡಲಾಗುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪರಿಹಾರ ಹಣವನ್ನು ಘೋಷಿಸಿರುವ ಬಗ್ಗೆ ತಿಳಿಸಿರುವ ಅವರು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

6 ಮಂದಿ ಸಾವು, 58 ಸೇತುವೆ ಕುಸಿತ
ಕೊಡಗಿನಲ್ಲಿ ಕಂಡು ಕೇಳರಿಯದ ಜಲಪ್ರಳಯಕ್ಕೆ ಜನ ತತ್ತರಿಸಿದ್ದಾರೆ. ನೂರಾರು ಮನೆಗಳು ನೆಲಸಮಾಧಿಯಾಗಿದ್ದು ಗುಡ್ಡಗಳು ಕುಸಿಯುತ್ತಿವೆ. ವರುಣನ ರೌದ್ರಾವತಾರಕ್ಕೆ ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ಭಾರೀ ಪ್ರವಾಹಕ್ಕೆ ಇದುವರೆಗೂ 6 ಮಂದಿ ಮೃತಪಟ್ಟಿದ್ದಾರೆ. 58 ಸೇತುವೆ ಕುಸಿದಿವೆ. ಜಿಲ್ಲೆಯಾದ್ಯಂತ ಸೇನೆ ಹಾಗೂ ಎನ್ ಡಿಆರ್ ಎಫ್ ತಂಡ  873 ಮಂದಿಯನ್ನು ರಕ್ಷಿಸಿಸಿದೆ.  ಹಲವು ಕಡೆ ವಿದ್ಯುತ್, ರಸ್ತೆ ಸಂಪರ್ಕ ಕಡಿತಗೊಂಡಿದೆ

Follow Us:
Download App:
  • android
  • ios