‘ಮಾಂಸ ತಿಂದೇ ಹೋಗಿದ್ದೇ ಅಂದುಕೊಳ್ಳಿ ಏನಿವಾಗ?’

ಮಾಜಿ ಸಿಎಂ ಸಿದ್ದರಾಮಯ್ಯ ಕೊಪ್ಪಳದಲ್ಲಿದ್ದಾರೆ. ಸದ್ಯದ ರಾಜಕಾರಣದ ಬೆಳವಣಿಗೆಳ ಬಗ್ಗೆ ಮಾತನಾಡುತ್ತ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ.

Karnataka Former CM Siddaramaiah Slams BJP at Koppal

ಕೊಪ್ಪಳ [ಜ.20] ನಾನು ದೇವರಿಲ್ಲ ಎಂದು ಹೇಳಿಲ್ಲ. ಒಂದು ಶಕ್ತಿ ಇದೆ, ಆದರೆ ಆತ್ಮಸಾಕ್ಷಿಗೆ ಅನುಗುಣವಾಗಿ  ನಡೆದುಕೊಳ್ಳಬೇಕು. ನನ್ನ ವಾಹನದ ಮೇಲೆ ಕಾಗೆ ಕುಳಿತಿದ್ದನ್ನು, ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿದ್ದನ್ನು, ಶೂ ಹಾಕಿಕೊಂಡು ಹೋಗಿದ್ದಾಗಿ ಸುದ್ದಿ ಮಾಡಿದರು‌, ಆಯ್ತು ತಿಂದೇ ಹೋಗಿದ್ದೇ ಅಂದುಕೊಳ್ಳಿ ಏನಿವಾಗ? ಬೇಡರ ಕಣ್ಣಪ್ಪ ಮಾಂಸ ಅರ್ಪಣೆ ಮಾಡಿದರೂ ದೇವರೂ ಪ್ರತ್ಯಕ್ಷವಾಗಲಿಲ್ಲವೆ? ಎಂದು  ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಮಾಧ್ಯಮಗಳ ಮೇಲೆ ಹರಿಹಾಯ್ದ ಸಿದ್ದರಾಮಯ್ಯ,  ಈಗಲ್ ಟನ್ ರೆಸಾರ್ಟ್ ಬಳ್ಳಾರಿ ಶಾಸಕರ ನಡುವೆ  ಗಲಾಟೆ ನನ್ನ ಗಮನಕ್ಕೆ ಬಂದಿದೆ. ಅಲ್ಲಿ ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಗೊತ್ತಿಲ್ಲ. ಹಾಗಾಗಿ ಮಾಹಿತಿ ತಗೆದುಕೊಂಡು ಹೇಳುವೆ. ರಾತ್ರಿ ಏನೋ ಗಲಾಟೆ ಆಗಿದೆ ಅಂತಾ ಹೇಳಿದ್ದರು. ಗಣೇಶ-ಆನಂದ್ ಸಿಂಗ್ ನಡುವೆ ಗಲಾಟೆ ಎಂದು ಹೇಳಲಾಗಿದ್ದರೂ  ಮಾಹಿತಿ ಗೊತ್ತಿಲ್ಲದೆ ಏನೂ ಹೇಳಲಿಕ್ಕೆ ಆಗಲ್ಲ. ಯಾರದ್ದು ತಪ್ಪು ಎಂದು ನೋಡುತ್ತೇನೆ ಎಂದರು.

ಸಿದ್ದುಗೆ ಹುಚ್ಚು: ಈಶ್ವರಪ್ಪಗೆ ಬುದ್ಧಿ ಭ್ರಮಣೆ| ನಾಯಕರ ಕಚ್ಚಾಟ

ಮತ್ತೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ಮಾತನಾಡೋಕೆ ಆ ಗಲಾಟೆ ನನ್ನ ಮುಂದೆ ನಡೆದಿದೆಯೇನ್ರಿ? ನಾನು ಸಿಎಂ ಆಗಬೇಕಂತ ನಮ್ಮ ಪಕ್ಷದಲ್ಲಿ‌ ಯಾರು ಹೇಳಿಲ್ಲ. ಸದ್ಯ ಕುಮಾರಸ್ವಾಮಿ‌ ಸಿಎಂ ಆಗಿದ್ದಾರೆ. ಬಿಎಸ್ವೈ ಸಿಎಂ ಆಗೋ ಕನಸು ಕಾಣುತ್ತ ಭ್ರಮೆಯಲ್ಲಿದ್ದಾರೆ.  ಈಶ್ವರಪ್ಪ ಅವರನ್ನು ನೀವು ಪ್ರಶ್ನೆ ಕೇಳಲ್ಲ. ಮಕ್ಕಳ ಕಳ್ಳರು ಯಾರೆಂದು ಕೇಳಿ?  ಈಶ್ವರಪ್ಪ ಅವರ ನಾಲಿಗೆ ಕೆಟ್ಟಿದೆ. ಅವರ ನಾಲಿಗೆಯಲ್ಲಿ ಕೆಟ್ಟ ಪದಗಳೆ ಬರುತ್ತಿವೆ, ಒಳ್ಳೆಯ ಪದ ಬರುತ್ತಿಲ್ಲ ಎಂದು ವಾಗ್ದಾಳಿ ಮಾಡಿದರು.

ಈಶ್ವರಪ್ಪ ಆರ್ ಎಸ್ ಎಸ್ ನಿಂದ ಬಂದವನು. ಹೀಗಾಗಿ ಕೆಟ್ಟಪದಗಳನ್ನು ಬಳಸುತ್ತಿದ್ದಾರೆ. ಆರ್ ಎಸ್ ಎಸ್ ಅವರಿಗೆ ಒಳ್ಳೆ ಪದ, ಒಳ್ಳೆಯ ಸಂಸ್ಕೃತಿ ಗೊತ್ತಿಲ್ಲ.  ಬರ ಪರಿಸ್ಥಿತಿ ಮತ್ತು ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಮಾಡಲು ಶಾಸಕರನ್ನು ಒಂದು ಕಡೆ ಸೇರಿಸಿದ್ದೇವು. ಬರ ಪರಿಶೀಲನೆಗೆ ನಾಲ್ಕು ತಂಡ ಮಾಡಿದ್ದೇವೆ ಎಂದು ಹೇಳಿದರು.

Latest Videos
Follow Us:
Download App:
  • android
  • ios