ಬೆಂಗಳೂರು (ಜು.18): ಸದನದಲ್ಲಿ ವಿಶ್ವಾಸ ಮತ ಯಾಚನೆ ಕಲಾಪ ಆರಂಭವಾಗಿದೆ. ಕಲಾಪ ಶುರುವಾದ ಕೂಡಲೇ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಲು ಆರಂಭಿಸಿದಾಗ, ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ‘ವಿಶ್ವಾಸ ಮತ’ ಕಲಾಪವನ್ನು ಓಂದೇ ದಿನದಲ್ಲಿ ಮುಗಿಸಬೇಕು ಎಂಬ ಬೇಡಿಕೆ ಸ್ಪೀಕರ್ ಮುಂದಿಟ್ಟರು.

ಅದಕ್ಕೆ ಈ ಹಿಂದೆ ನಡೆದ ವಿಶ್ವಾಸ ಮತ ಕಲಾಪಗಳ ಇತಿಹಾಸವನ್ನೂ ಮುಂದಿಟ್ಟರು. ಅದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ಇದು ಸದನಕ್ಕೆ ಬಿಟ್ಟ ವಿಚಾರ ಎಂದು ತಳ್ಳಿಹಾಕಿದರು.

"

ಇದನ್ನೂ ಓದಿ | ಮಾತಿನಲ್ಲಿ ಎಡವಿದ ಸಿದ್ದರಾಮಯ್ಯ; ಗುಡುಗಿದ ಡಿಕೆಶಿ

ಚರ್ಚೆ ಮುಂದುವರಿಸಿದ ಸಿದ್ದರಾಮಯ್ಯ, ಪಕ್ಷಾಂತರದ ಇತಿಹಾಸ, ಪಕ್ಷಾಂತರ ನಿಷೇಧ ಕಾಯ್ದೆ ನಡೆದು ಬಂದ ದಾರಿ ಮತ್ತು ಈಗಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಉಲ್ಲೇಖಿಸಿದರು.

ಸುಪ್ರೀಂ ಕೋರ್ಟ್ ನಲ್ಲಿ ಅತೃಪ್ತ ಶಾಸಕರು ಸಲ್ಲಿಸಿದ ಅರ್ಜಿಯಲ್ಲಿ ಸ್ಪೀಕರ್, ಮುಖ್ಯಮಂತ್ರಿ ಮತ್ತು ಭಾರತ ಸರ್ಕಾರವನ್ನು ಪ್ರತಿವಾದಿಯಾಗಿ ಮಾಡಲಾಗಿದೆ, ಆದರೆ ಪ್ರಕರಣದ ಪ್ರಮುಖ ಭಾಗವಾಗಿರುವ ಕಾಂಗ್ರೆಸ್ ಪಕ್ಷವನ್ನೇ ಅದರಲ್ಲಿ ಯಾಕೆ ಸೇರಿಸಲಾಗಿಲ್ಲ ಎಂಬ ಪ್ರಶ್ನೆಯನ್ನು ಎತ್ತಿದರು. 

"

ಸಿದ್ದರಾಮಯ್ಯ ‘ಸುಪ್ರೀಂ ಕೋರ್ಟ್’ನ್ನು ಎಳೆ ತಂದಿದ್ದು ಬಿಜೆಪಿ ನಾಯಕರಿಗೆ ಕೆರಳಿಸಿತು.