ಬೆಂಗಳೂರು (ಜು.18): ರಾಜ್ಯದ ಜನತೆ ತೀವ್ರ ಕುತೂಹಲದಿಂದ ಎದುರು ನೋಡುತ್ತಿದ್ದ ‘ವಿಶ್ವಾಸ ಮತಯಾಚನೆ’ ಪ್ರಕ್ರಿಯೆ ಆರಂಭವಾಗಿದೆ.

ಕಲಾಪ ಆರಂಭವಾಗುತ್ತಿದ್ದಂತೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು. ಅದರ ಬೆನ್ನಲ್ಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಚರ್ಚೆ ಮುಂದುವರೆಸಿದರು.

ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಇತಿಹಾಸದ ಪಾಠಗಳನ್ನು ಉದಾಹರಣೆಯಾಗಿ ವಿವರಿಸುತ್ತಾ ಹೋದರು. ಸಿದ್ದರಾಮಯ್ಯ ಸುದೀರ್ಘ ಭಾಷಣದಿಂದ ರೋಸಿ ಹೋದ ವಿಪಕ್ಷ ಶಾಸಕರು ಗರಂ ಆದ ಘಟನೆ ನಡೆಯಿತು.

ಇದನ್ನೂ ಓದಿ | ‘ಗೊಂದಲ’ ಹುಟ್ಟು ಹಾಕಿದ ಸಿದ್ದರಾಮಯ್ಯ ‘ಹೊಸ ಪ್ರಶ್ನೆ’! ಬಿಜೆಪಿ ಗರಂ

ನೇರವಾಗಿ ವಿಷಯಕ್ಕೆ ಬನ್ನಿ, ಏನ್ ಹೇಳ್ಬೇಕೋ ನೇರವಾಗಿ ಹೇಳ್ಬಿಡಿ ಎಂದು ಜಗದೀಶ್ ಶೆಟ್ಟರ್ ಹೇಳಿದ್ದು ಗದ್ದಲಕ್ಕೆ ಕಾರಣವಾಯ್ತು. ಈ ಸಂದರ್ಭದಲ್ಲಿ ಸ್ಪಷ್ಟೀಕರಣ ನೀಡಲು ಮುಂದಾದ ಸಿದ್ದರಾಮಯ್ಯ, ‘ನಾನು ವಿಪಕ್ಷ ನಾಯಕ’ ಎಂದು ಎಡವಿದ್ದು ಬಿಜೆಪಿ ನಾಯಕರ ‘ಖುಷಿ’ಗೆ ಕಾರಣವಾಯ್ತು.

ಗುಡುಗಿದ ಡಿಕೆಶಿ:

"
ಸಿದ್ದರಾಮಯ್ಯ ಪಕ್ಷಾಂತರ ಬಗ್ಗೆ ಮಾತನಾಡುವಾಗ ಬಿಜೆಪಿ ಶಾಸಕ ಮಾಧುಸ್ವಾಮಿ ಪದೇ ಪದೇ ಆಕ್ಷೇಪ ವ್ಯಕ್ತಪಡಿಸಿದ್ದು, ಸಚಿವ ಡಿ.ಕೆ. ಶಿವಕುಮಾರ್‌ರನ್ನು ಕೆರಳಿಸಿತು. ಅವರಿಬ್ಬರ ನಡುವೆ ಬಿಸಿ-ಬಿಸಿ ವಾಗ್ಯುದ್ಧ ಕೂಡಾ ನಡೆಯಿತು. ಕೊನೆಗೆ ಸ್ಪೀಕರ್ ರಮೇಶ್ ಕುಮಾರ್ ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನ ಪಡಿಸಿದರು.