ಬೆಂಗಳೂರು[ಜು. 21] ರಾಜ್ಯ ರಾಜಕಾರಣ ಕ್ರಿಕೆಟ್ ಪಂದ್ಯಕ್ಕಿಂತಲೂ ರೋಚಕತೆ ಪಡೆದುಕೊಂಡಿದೆ. ಚೇಸಿಂಗ್ ನಡೆಸುತ್ತಿರುವ ದೋಸ್ತಿ ಪಡೆಯ ನಾಯಕರು ಅತೃಪ್ತರ ಮನವೊಲಿಕೆಗೆ ಕಸರತ್ತು ಮುಂದುವರಿಸಿಯೇ ಇದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ  ಆನಂದ್ ಸಿಂಗ್ ಅಕ್ಕನ ಮನೆಗೆ ಭೇಟಿ ನೀಡಿದ್ದಾರೆ. ಸಹಕಾರನಗರದಲ್ಲಿರುವ ಆನಂದ್ ಸಿಂಗ್ ಅಕ್ಕನ ಮನೆಗೆ ಸಿದ್ದರಾಮಯ್ಯ ಕೊನೆ ಕ್ಷಣದಲ್ಲಿ ತೆರಳಿರುವುದು ಕುತೂಹಲ ಮೂಡಿಸಿದೆ.

‘ಬರಲು ರೆಡಿ ಇದ್ದಾರೆ’ ವಿಶ್ವಾಸಕ್ಕೂ ಮುನ್ನ JDS ಶಾಸಕನ ಹೇಳಿಕೆ ತಂದ ಸಂಚಲನ

ಬೆಂಗಾವಲು ವಾಹನ ಬಿಟ್ಟು ಸಿದ್ದರಾಮಯ್ಯ ಬಂದಿರುವುದು ಸಹ  ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣ ಮಾಡಿಕೊಟ್ಟಿದೆ. ಮೊಟ್ಟ ಮೊದಲಿಗರಾಗಿ ಎರಡನೇ ಕಂತಿನಲ್ಲಿ ರಾಜೀನಾಮೆ ಕೊಟ್ಟಿದ್ದ ವಿಜಯನಗರ ಶಾಸಕ ಆನಂದ್ ಸಿಂಗ್ ಎಲ್ಲಿದ್ದಾರೆ? ಎಂಬ ಮಾಹಿತಿ ಪಡೆದುಕೊಳ್ಳಲು ಸಿದ್ದರಾಮಯ್ಯ ಆಗಮಿಸಿದ್ದಾರೆ ಎನ್ನಲಾಗಿದೆ.