ಮಂಡ್ಯ[ಜು. 21]  ಮಂಡ್ಯದ ಮಳವಳ್ಳಿಯಲ್ಲಿ JDS ಶಾಸಕ ಡಾ.ಅನ್ನದಾನಿ ನೀಡಿರುವ ಹೇಳಿಕೆ ನಾಳಿನ ವಿಶ್ವಾಸ ಮತಕ್ಕೂ ಮುನ್ನ ಸಂಚಲನ ಮೂಡಿಸಿದೆ. ಸರ್ಕಾರ ಉಳಿಯುತ್ತೆ. ಯಾವುದೇ ಸಮಸ್ಯೆ ಆಗಲ್ಲ. ಮುಂಬೈನಲ್ಲಿರೋ‌ ಶಾಸಕರು ವಾಪಸ್ ಬರಲು, ನಮ್ಮೊಂದಿಗೆ ಮಾತನಾಡಲು ರೆಡಿ ಇದ್ದಾರೆ ಎಂದು ಹೇಳಿದ್ದಾರೆ.

ಆದರೆ ಅಲ್ಲಿನ ಬಿಜೆಪಿ ಸರ್ಕಾರ ಅವರನ್ನು ಬಲವಂತವಾಗಿ ಬಂಧಿಸಿದೆ. ಮಹಾರಾಷ್ಟ್ರ ಸರ್ಕಾರಕ್ಕೆ ತಾಕತ್ತಿದ್ದರೆ ಶಾಸಕರನ್ನು ಹೋಟೆಲ್ ನಿಂದ ಆಚೆಗೆ ಕಳುಹಿಸಲಿ. ಅತೃಪ್ತ ಶಾಸಕರು ವಿಶ್ವಾಸ ಮತಯಾಚನೆಗೆ ಬರಲಿ ಬಿಜೆಪಿ ಗೆ ಮತ ಹಾಕಿದ್ರೆ ಹಾಕಿಸಿಕೊಳ್ಳಿ., ಅವರಿಗೆ ಮಂತ್ರಿ ಹಾಗೂ ಹಣದ ಆಮಿಷವೊಡ್ಡಲಾಗಿದೆ ಎಂದು ಆರೋಪಿಸಿದರು.

ವಿಧಾನಸಭೆಗೆ ಸ್ಪೀಕರ್ ಅವರೇ ಸುಪ್ರೀಂ. ರಾಜ್ಯಪಾಲರು ಏನು ಮಾಡಲು ಸಾಧ್ಯ ಇಲ್ಲ. ಇದನ್ನ ಸುಪ್ರೀಂಕೋರ್ಟ್ ಸಹ ಹೇಳಿದೆ. ನಾನು ಜೆಡಿಎಸ್ ಗೆ ವರ್ಜಿನಲ್ ಪೀಸ್. ಕುಮಾರಸ್ವಾಮಿಯ ಅಪ್ಪಟ ಅಭಿಮಾನಿ. ನಾನು ಹಣ, ಆಮಿಷಕ್ಕೆ ಮಾರಾಟ ಆಗುವ ವ್ಯಕ್ತಿ ಅಲ್ಲ. ಎಲ್ಲರೂ ಒಗ್ಗಟ್ಟಾಗಿ ರೆಸಾರ್ಟ್ ನಲ್ಲಿ ಇದ್ದೆವು. ಕಾರ್ಯಕ್ರಮ ನಿಮಿತ್ತ ಕ್ಷೇತ್ರಕ್ಕೆ ಬಂದಿದ್ದೇವೆ ಎಂದು ಹೇಳಿದರು.