ಬೆಂಗಳೂರು[ಜು. 23]  14 ತಿಂಗಳಿನಿಂದ ಜಾರಿಯಲ್ಲಿದ್ದ  ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ಸದನದ ವಿಶ್ವಾಸ ಕಳೆದುಕೊಂಡಿದೆ. ಸಿಎಂ ಕುಮಾರಸ್ವಾಮಿ 18 ದಿನಗಳ ಮೇಲಾಟದ ನಂತರ ಮಂಗಳವಾರ ಸಂಜೆ ವಿಶ್ವಾಸ ಮತ ಯಾಚನೆ ಮಾಡಿದ್ದಾರೆ. ಇದಾದ ನಂತರ ಸ್ಪೀಕರ್ ರೂಲಿಂಗ್ ನೀಡಿದ್ದು ಒಂದೊಂದೇ ಸಾಲಿನಲ್ಲಿ ಇದ್ದವರನ್ನು ಮತಗಣನೆ ಮಾಡಲಾಗಿದೆ.

ಮೊದಲು ದೋಸ್ತಿ ಸರ್ಕಾರದ ಪರವಾಗಿ ಇದ್ದವರ ಲೆಕ್ಕ ಮಾಡಲಾಯಿತು. ಇದಾದ ಮೇಲೆ ವಿಶ್ವಾಸ ಮತಕ್ಕೆ ವಿರುದ್ಧವಾಗಿ ಇದ್ದವರ ಲೆಕ್ಕ ಹಾಕಲಾಯಿತು. ಎಲ್ಲರ ಹೆಸರನ್ನು ಅಧಿಕಾರಿಗಳು ಬರೆದುಕೊಂಡು ಲೆಕ್ಕ ಹಾಕಿದರು.

‘ಯಡಿಯೂರಪ್ಪ ಸರ್ಕಾರ ರಚಿಸಿದರೂ ವರ್ಷಕ್ಕಿಂತ ಹೆಚ್ಚು ಕಾಲ ಅಧಿಕಾರ ನಡೆಸಲ್ಲ

ಫಲಿತಾಂಶವನ್ನು ಪ್ರಕಟ ಮಾಡಿದ ಸ್ಪೀಕರ್ ರಮೇಶ್ ಕುಮಾರ್ ಸಿಎಂ ಮಂಡಿಸಿದ ವಿಶ್ವಾಸಮತ ಬಿದ್ದುಹೋಗಿದೆ ಎಂದು ಘೋಷಣೆ ಮಾಡಿದರು. ಕರ್ನಾಟಕದ ದೋಸ್ತಿ ಸರ್ಕಾರ ವಿಶ್ವಾಸಮತ ಯಾಚನೆಯಲ್ಲಿ ಸೋಲು ಕಂಡಿದ್ದು ಅಧಿಕಾರ ಸ್ಥಾಪಿಸುವತ್ತ ಬಿಜೆಪಿ ಕಾಲಿರಿಸಿದೆ. ಕಳೆದ 18 ದಿನಗಳಿಂದ ನಡೆಯುತ್ತಿದ್ದ ಎಲ್ಲ ರಾಜಕಾರಣದ ಹೈಡ್ರಾಮಕ್ಕೆ ತೆರೆಬಿದ್ದಿದ್ದು ಕಮಲ ನಾಯಕರು ಇನ್ನು ಮುಂದೆ ಹೇಗೆ ಆಡಳಿತ ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಸರ್ಕಾರ ರಚನೆಹಾದಿಯಲ್ಲಿ ಬಿಜೆಪಿ ಹೊರಟಿದ್ದು ಸಿಎಂ ಕುರ್ಚಿಗೆ ಬಿಎಸ್. ಯಡಿಯೂರಪ್ಪ ಸನಿಹದಲ್ಲಿದ್ದಾರೆ.

ಸದನದಲ್ಲಿ ಹಾಜರಿದ್ದವರು:

ಸದನದಲ್ಲಿ ಹಾಜರಿದ್ದವರು: 204

ವಿಶ್ವಾಸ ಮತ ಪ್ರಸ್ತಾವದ ಪರ: 99

ವಿಶ್ವಾಸ ಮತ ಪ್ರಸ್ತಾವದ ವಿರುದ್ಧ: 105

ಗೈರಾದವರು ಇಬ್ಬರು ಪಕ್ಷೇತರರು ಸೇರಿ 20