ರೈತರು ಸಾಲ ಮನ್ನಾ ಮಾಡಿ ಎಂದು ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಇತ್ತೀಚೆಗೆ ಭೂಮಿಯಲ್ಲಿ ಹೆಚ್ಚೆಚ್ಚು ಬೆಳೆಯಬೇಕು ಎಂಬ ದುರಾಸೆ ಹೆಚ್ಚಾಗಿದೆ ಹೆಚ್ಚು ಒತ್ತಡದಿಂದಾಗಿ ಭೂಮಿ ಹಾಳಾಗತೊಡಗಿದೆ ಎಂದು ನಟ ಪ್ರಕಾಶ್ ರೈ ಆತಂಕ ವ್ಯಕ್ತಪಡಿಸಿದ್ದಾರೆ. 

ಚಾಮರಾಜನಗರ: ರೈತರು ಸಾಲ ಮನ್ನಾ ಮಾಡಿ ಎಂದು ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಇತ್ತೀಚೆಗೆ ಭೂಮಿಯಲ್ಲಿ ಹೆಚ್ಚೆಚ್ಚು ಬೆಳೆಯಬೇಕು ಎಂಬ ದುರಾಸೆ ಹೆಚ್ಚಾಗಿದೆ ಹೆಚ್ಚು ಒತ್ತಡದಿಂದಾಗಿ ಭೂಮಿ ಹಾಳಾಗತೊಡಗಿದೆ. 

Add Asianetnews Kannada as a Preferred SourcegooglePreferred

ಹೀಗಾಗಿ ರೈತರಿಗೆ ಸಾಲದ ಹೊರೆ ಹೆಚ್ಚಾಗುತ್ತಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.

 ಚಾಮರಾಜನಗರದ ಅಮೃತಭೂಮಿಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಯುವ ರೈತ ಸಂವಾದ ದಲ್ಲಿ ಭಾಗಿಯಾಗಿದ್ದ ರೈ ಅವರು ಮಾತನಾಡಿ, ನಾನು ಹಿಂದು ವಿರೋಧಿಯಲ್ಲ. ಮೋದಿಯಷ್ಟೆ ಅಲ್ಲ, ನಾಳೆ ರಾಹುಲ್ ಗಾಂಧಿ ಪ್ರಧಾನಿಯಾದರೂ ಪ್ರಶ್ನೆ ಕೇಳಿ ಉತ್ತರ ಕೊಡಿ ಎನ್ನುತ್ತೇನೆ. ಪ್ರಶ್ನೆ ಕೇಳುವ ಹಕ್ಕು ನನಗಿದೆ ಎಂದು ಹೇಳಿದರು.