ಕಾಂಗ್ರೆಸ್ ಸಚಿವರ ಲಾಬಿಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇದೀಗ ಬ್ರೇಕ್ ಹಾಕಿದ್ದಾರೆ. ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಸರ್ಕಾರದ ಮುಖ್ಯಕಾರ್ಯದರ್ಶಿ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. 

ಬೆಂಗಳೂರು :  ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕಾಂಗ್ರೆಸ್ ಸಚಿವರ ಲಾಬಿಗೆ ಬ್ರೇಕ್ ಬಿದ್ದಿದ್ದು, ಸರ್ಕಾರದಿಂದ ಈ ನಿಟ್ಟಿನಲ್ಲಿ ಹೊಸ ಸುತ್ತೊಲೆ ಹೊರಡಿಸಲಾಗಿದೆ. ಸಿಎಂ ಗಮನಕ್ಕೆ ಬಂದು ವರ್ಗಾವಣೆ ಆದ ಅಧಿಕಾರಿಗಳಿಗೆ ಮರುಸ್ಥಳ ಕೊಡುವುದಿಲ್ಲ ಎಂದು ಸಿಎಸ್ ಸುತ್ತೋಲೆ ಹೊರಡಿಸಿದ್ದಾರೆ. 

Add Asianetnews Kannada as a Preferred SourcegooglePreferred

ವರ್ಗಾವಣೆಗೊಂಡು ಮರುಸ್ಥಳಕ್ಕೆ ಲಾಬಿ ಮಾಡುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದ್ದು, ವರ್ಗಾವಣೆ ಮಾಡಿದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ರಿಪೋರ್ಟ್ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ.

ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಆದೇಶ ನೀಡಿದ್ದು, ವರ್ಗಾವಣೆ ಮಾಡಿದ ಮೇಲೆ ರಿಪೋರ್ಟ್ ಮಾಡಿಕೊಳ್ಳಲು ಅಧಿಕಾರಿಗಳು ವಿಳಂಭ ಧೋರಣೆ ಅನುಸರಿಸುತ್ತಿದ್ದಾರೆಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ. 

ಇನ್ನು ಮುಖ್ಯಮಂತ್ರಿಗಳ ಅನುಮೋದನೆಗೆ ಹೋಗಿ ಆಗಿರುವ ವರ್ಗಾವಣೆಗೆ ಯಾವುದೇ ರೀತಿಯ ಮರುಸ್ಥಳ ನೀಡುವುದಿಲ್ಲ ಎಂದು ಸುತ್ತೊಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.