ಬೆಂಗಳೂರು [ಜು.14] : ಕಾಂಗ್ರೆಸ್ ನಲ್ಲಿ ಈಗ ಅನುಮಾನದ ರಾಜಕೀಯ ಶುರುವಾಗಿದೆ.  ಕಾಂಗ್ರೆಸ್ ಅಂಗಳದಲ್ಲಿ ಹೊಸ ರಾಜೀನಾಮೆ ಆಗದಂತೆ ನೋಡಿಕೊಳ್ಳುವುದರಲ್ಲಿ ನಾಯಕರು ಬ್ಯುಸಿಯಾಗಿದ್ದಾರೆ. 

ಈಗಾಗಲೇ ರಾಜೀನಾಮೆ ನೀಡಿ ತೆರಳಿರುವ ಅತೃಪ್ತ ಕಾಂಗ್ರೆಸಿಗರ ಜೊತೆಗೆ ಸಂಪರ್ಕದಲ್ಲಿದ್ದಾರೆ ಎನ್ನುವವರ ಮೇಲೆ ಕಣ್ಣಿರಿಸಿದ್ದು, ತಡರಾತ್ರಿವರೆಗೂ ಕೂಡ ಕಾರ್ಯಾಚರಣೆ ನಡೆಸಲಾಗುತ್ತಿದೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೊರಗಿನವರ, ಅಪರಿಚಿತರ ಸಂಪರ್ಕ ಆಗದಂತೆ ಕಟ್ಟೆಚ್ಚರಿಕೆ ವಹಿಸಲಾಗಿದೆ.  ಕಾಂಗ್ರೆಸ್ ಅತೃಪ್ತರು  ಇದೀಗ ಒಗ್ಗಟ್ಟಿನಿಂದ ಸಾಗಿದ್ದು ಅವರ ಒಗ್ಗಟ್ಟು ಒಡೆಯಲೂ ಪ್ರಯತ್ನಗಳು ನಡೆದಿದೆ. 

ಅತೃಪ್ತರ ಕುಟಂಬಸ್ಥರು, ಆರ್ಥಿಕ ನೆರವು ನೀಡುವವರ ಮನ ಒಲಿಸುವ‌ ಕುರಿತು ಕಾಂಗ್ರೆಸ್ ನಾಯಕರು ಪ್ಲಾನ್ ಮಾಡಿದ್ದಾರೆ.