ಹಾಸನ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ಪಕ್ಷಗಳ ನಡುವೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗಿದೆ. ಇದೇ ವೇಳೆ ಕಾಂಗ್ರೆಸ್ ಹಿರಿಯ ಮುಖಂಡರೋರ್ವರು ಬಿಜೆಪಿ ಸೇರ್ಪಡೆಯಾಗುವ ಗುಸು ಗುಸು ಕೇಳಿ ಬಂದಿದೆ. 

ಹಾಸನದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದರೆ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿಜೆಪಿ ಹೋಗುತ್ತಾರೆ ಎನ್ನುವ ವಿಚಾರ ಕೇಳಿ ಬಂದಿದೆ. 

ಕಾಂಗ್ರೆಸ್ ಟಿಕೆಟ್‌ಗಾಗಿ ಕೊನೆ ಕ್ಷಣದವರೆಗೆ ಕಾಯುತ್ತೇನೆ: ಸುಮಲತಾ

ಜೆಡಿಎಸ್ ನಿಂದ ಪ್ರಜ್ವಲ್ ಸ್ಪರ್ಧಿಸಿದರೆ, ಬಿಜಪಿಯಿಂದ ಎ ಮಂಜು ಸ್ಪರ್ಧಿಸುವ ಸಾಧ್ಯತೆ ಇದೆ. ಈಗಾಗಲೇ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳಲ್ಲಿ ಎ. ಮಂಜು ಹೆಸರು ಪ್ರಸ್ತಾಪವಾಗಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸಂಭಾವ್ಯರ ಪಟ್ಟಿ ಹರಿದಾಡುತ್ತಿದ್ದು ಅದರಲ್ಲಿ ಎ. ಮಂಜು ಹೆಸರು ಕಂಡು ಬಂದಿದ್ದು, ತಮ್ಮ ಬೆಂಬಲಿಗರೊಂದಿಗೆ ಮಂಜು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಲಾರಂಭಿಸಿದೆ. 

ಡಿಕೆಸು ವಿರುದ್ಧ ಕಣಕ್ಕೆ ಇಳಿಯುವ ಪ್ರಬಲ ಬಿಜೆಪಿ ಅಭ್ಯರ್ಥಿ ಯಾರು..?

ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಕೂಡ ಜೆಡಿಎಸ್ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದು, ನೇರವಾಗಿಯೇ ಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. 

ಅಲ್ಲದೇ ಹಾಸನದಿಂದ ಲೋಕಸಭಾ ಚುನಾವಣೆಗೆ ಪ್ರಜ್ವಲ್ ಸ್ಪರ್ಧೆಯನ್ನು ವಿರೋಧಿಸಿದ್ದು, ದೇವೇಗೌಡರಿಗೆ ಮಾತ್ರವೇ ತಮ್ಮ ಬೆಂಬಲ ಎಂದಿದ್ದರು.  

ಇದೀಗ ಅಸಮಾಧಾನಗೊಂಡಿದ್ದು, ಬಿಜೆಪಿಗೆ ತೆರಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.