ಮಂಡ್ಯ (ಮಾ. 08): ಲೋಕಸಭಾ ಚುನಾವಣೆಗೆ ಸುಮಲತಾ ಸ್ಪರ್ಧೆ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.  ಕಾಂಗ್ರೆಸ್ ಟಿಕೆಟ್ ಗಾಗಿ ಕೊನೆ ಕ್ಷಣದವರೆಗೂ ಕಾಯುತ್ತೇನೆ.  ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು ಎಂದು ಮೈಸೂರಿನಲ್ಲಿ ಸುಮಲತಾ ಅಂಬರೀಶ್ ಹೇಳಿದ್ದಾರೆ. 

ಲೋಕಸಭಾ ಚುನಾವಣೆ : ಸೋನಿಯಾ, ರಾಹುಲ್ ಕ್ಷೇತ್ರ ಫಿಕ್ಸ್

ನಾನು ಟಿಕೆಟ್ ವಿಚಾರವಾಗಿ ಯಾರನ್ನು ಭೇಟಿ ಮಾಡಿಲ್ಲ. ಕೊನೆವರೆಗೂ ಕಾದು ನೋಡುತ್ತೇನೆ ಎಂದಿದ್ದಾರೆ. 

ಇಂದು ವಿಶ್ವ ಮಹಿಳೆಯರ ದಿನ. ಮಹಿಳಾ ದಿನಾಚರಣೆ ಬಗ್ಗೆ ಮಾತನಾಡುತ್ತಾ,  ಈ ಪ್ರಪಂಚದಲ್ಲಿ ತಾಯಿಗಿಂತ ದೊಡ್ಡವರು ಯಾರೂ ಇಲ್ಲ.  ತಾಯಿಗೆ ನೋವಾಗುವಂತ ಮಾತುಗಳು ಬೇಡ ಎಂದಿದ್ದಾರೆ.  

ಮೋದಿ ಬಣದ ನಾಯಕ ಈಗ ಪ್ರಿಯಾಂಕ ಬಣಕ್ಕೆ

ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆ ಆಗುತ್ತಿದೆ.  ಅಭಿಮಾನಿಗಳೇ ವೈಯಕ್ತಿಕ ಟೀಕೆ ಬೇಡ. ಅಲ್ಲಿ ಒಬ್ಬರು ತಾಯಿ ಇದ್ದಾರೆ. ಅವರಿಗೂ ನೋವಾಗುತ್ತೆ. ನಿಖಿಲ್ ಜಾಗದಲ್ಲಿ ನನ್ನ ಮಗನನ್ನ ನಿಲ್ಲಿಸಿ ನೋಡುತ್ತೇನೆ.  ನನ್ನ‌ ಮಗನಿಗೆ ಬೈದಾಗ ಎಷ್ಟು ನೋವಾಗುತ್ತದೋ ಅಷ್ಟೇ ನೋವು ಆ ತಾಯಿಗೂ ಆಗುತ್ತೆ ಎಂದು ಪರೋಕ್ಷವಾಗಿ ನಿಖಿಲ್ ತಾಯಿ ಅನಿತಾ ಕುಮಾರಸ್ವಾಮಿ ಪರ ಸುಮಲತಾ ನಿಂತಿದ್ದಾರೆ.  

ಮಂಡ್ಯದಲ್ಲಿ ಮನೆ ಸೊಸೆಯಂತೆ ನನ್ನನ್ನು ನೋಡುತ್ತಿದ್ದಾರೆ.  ಈವರೆಗೆ ನಾನು ಜನರನ್ನ ಚುನಾವಣೆ ದೃಷ್ಟಿಯಿಂದ ಭೇಟಿ ಮಾಡಿಲ್ಲ. ಸ್ವಯಂಪ್ರೇರಿತವಾಗಿ ಜನ ಬರುತ್ತಿರುವುದು ಖುಷಿ ತಂದು ಕೊಡುತ್ತದೆ ಎಂದು ಸುಮಲತಾ ಹೇಳಿದ್ದಾರೆ.