ಬೆಂಗಳೂರು[ಜು. 06]  ರಾಜೀನಾಮೆ ನೀಡಿರುವ ಜಯನಗರ ಶಾಸಕಿ ಸೌಮ್ಯರೆಡ್ಡಿ ಜೊತೆ ರಾಜ್ಯ  ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮಾತುಕತೆಗೆ ಮುಂದಾಗಿದ್ದಾರೆ.

ಸೌಮ್ಯ ರೆಡ್ಡಿ ಅವರ ಮನವೊಲಿಸಲು ವೇಣುಗೋಪಾಲ್ ಇನ್ನಿಲ್ಲದ ಕಸರತ್ತು ಆರಂಭಿಸಿದ್ದು ಸೌಮ್ಯಾ ರೆಡ್ಡಿ ಅವರ ತಂದೆ ಬಿಟಿಎಂ ಶಾಸಕ ರಾಮಲಿಂಗಾ ರೆಡ್ಡಿ ಅವರ ಮನವೊಲಿಕೆಗೂ ಪ್ರಯತ್ನ ಪಟ್ಟಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಸಂಧಾನಕ್ಕೆ ಯತ್ನ ಮಾಡಿದ್ದಾರೆ.

ರಾಜೀನಾಮೆ ಪರ್ವದ ನಡುವೆ ಟ್ರಬಲ್ ಶೂಟರ್‌ ಡಿಕೆಶಿಗೆ ಮತ್ತೊಂದು ಟ್ರಬಲ್

ಶನಿವಾರ ಬೆಳಗ್ಗೆ ವಿಧಾನಸೌಧದ ಸ್ಪೀಕರ್ ಕಚೇರಿಗೆ ಆಗಮಿಸಿದ ಅತೃಪ್ತ ಶಾಸಕರು ಒಬ್ಬರಾದ ಮೇಲೆ ಒಬ್ಬರು ರಾಜೀನಾಮೆ ನೀಡಿದ್ದರು. ಬೆಂಗಳೂರಿನ್ನು ಪ್ರತಿನಿಧಿಸುವ ಶಾಸಕರು ಬೆಂಗಳೂರರಿನಲ್ಲೇ ಉಳಿದುಕೊಂಡಿದ್ದರೆ ಇನ್ನುಳಿದವರು  ಮುಂಬೈ ವಿಮಾನ ಏರಿದ್ದಾರೆ.