Asianet Suvarna News Asianet Suvarna News

ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ಮುಹೂರ್ತ ಫಿಕ್ಸ್?

ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ಮುಹೂರ್ತ ಫಿಕ್ಸ್?

Karnataka Co ordination Commity Meeting  To be Held Today
Author
Bengaluru, First Published Dec 5, 2018, 7:27 AM IST

ಬೆಂಗ​ಳೂರು :  ಆಪ​ರೇ​ಷನ್‌ ಕಮಲದ ಭೀತಿ ಹಾಗೂ ತೀವ್ರ​ಗೊ​ಳ್ಳು​ತ್ತಿ​ರುವ ಸಚಿವ ಸ್ಥಾನಾ​ಕಾಂಕ್ಷಿ​ಗಳ ಅತೃ​ಪ್ತಿಯ ಬೇಗೆಯ ನಡು​ವೆಯೇ ಬುಧ​ವಾರ ನಡೆ​ಯ​ಲಿ​ರುವ ಸಮ​ನ್ವಯ ಸಮಿತಿ ಸಭೆಯಲ್ಲಿ ಬೆಳ​ಗಾವಿ ಅಧಿ​ವೇ​ಶ​ನಕ್ಕೂ ಮುನ್ನ ಸಂಪುಟ ವಿಸ್ತ​ರಣೆ ಮಾಡ​ಬೇಕೋ ಅಥವಾ ಅನಂತರ ಮಾಡ​ಬೇಕೋ ಎಂಬ ಮಹ​ತ್ವದ ಪ್ರಶ್ನೆಗೆ ಉತ್ತರ ಕಂಡು​ಕೊ​ಳ್ಳುವ ಪ್ರಯತ್ನವನ್ನು ಉಭಯ ಪಕ್ಷ​ಗಳ ನಾಯ​ಕರು ನಡೆ​ಸ​ಲಿ​ದ್ದಾ​ರೆ.

ರಾಜ್ಯ ಸರ್ಕಾ​ರ​ವನ್ನು ಅಸ್ಥಿ​ರ​ಗೊ​ಳಿ​ಸಲು ಕಾಂಗ್ರೆಸ್‌ ಶಾಸ​ಕ​ರನ್ನು ಸೆಳೆ​ಯಲು ಬಿಜೆಪಿ ಸತತ ಪ್ರಯತ್ನ ಮಾಡು​ತ್ತಿ​ರುವುದು ಮನ​ದ​ಟ್ಟಾ​ಗಿ​ರುವ ಹಿನ್ನೆ​ಲೆ​ಯಲ್ಲಿ ಕಾಂಗ್ರೆಸ್‌ ನಾಯ​ಕರು ಆತಂಕಕ್ಕೆ ಒಳ​ಗಾ​ಗಿ​ದ್ದಾರೆ. ಸಚಿವ ಸಂಪುಟ ವಿಸ್ತ​ರಣೆಯಾಗ​ಬೇಕು ಎಂದು ಪಟ್ಟು ಹಿಡಿ​ದಿ​ರುವ ಪಕ್ಷದ ಅತೃಪ್ತ ಶಾಸ​ಕರ ಬೇಡಿ​ಕೆ​ಯನ್ನು ಅಲ​ಕ್ಷಿ​ಸಿ​ದರೆ ಅದು ಸರ್ಕಾ​ರದ ಅಸ್ತಿ​ತ್ವಕ್ಕೆ ಮಾರ​ಕ​ವಾ​ಗ​ಬ​ಹುದು ಎಂಬ ಭೀತಿಯೂ ಇದೆ. ಇದೇ ವೇಳೆ ಸಂಪುಟ ವಿಸ್ತ​ರ​ಣೆ​ ಮಾಡಿ​ದರೆ ಅಸ​ಮಾ​ಧಾ​ನ​ಗೊ​ಳ್ಳುವ ಶಾಸ​ಕರ ಗುಂಪೊಂದಕ್ಕೆ ಬಿಜೆ​ಪಿ​ಯತ್ತ ಸಾಗಲು ನಾವೇ ದಾರಿ ಮಾಡಿ​ಕೊ​ಟ್ಟಂತೆ ಆಗು​ತ್ತದೆ ಎಂಬ ಚಿಂತೆಯೂ ಇದೆ.

ಈ ಹಿನ್ನೆ​ಲೆ​ಯಲ್ಲಿ ಬುಧ​ವಾರ ಸಂಜೆ 5ಕ್ಕೆ ಸಮ​ನ್ವಯ ಸಮಿತಿ ಅಧ್ಯಕ್ಷ ಸಿದ್ದ​ರಾ​ಮಯ್ಯ ಅವರ ಅಧ್ಯ​ಕ್ಷ​ತೆ​ಯಲ್ಲಿ ನಡೆ​ಯ​ಲಿ​ರುವ ಸಮ​ನ್ವಯ ಸಮಿತಿ ಸಭೆ​ಯಲ್ಲಿ ಒಂದು ಸ್ಪಷ್ಟನಿರ್ಧಾರ ಹಾಗೂ ತಾವು ಕೈಗೊ​ಳ್ಳುವ ನಿರ್ಧಾರದಿಂದ ಶಾಸ​ಕರು ಬಿಜೆ​ಪಿ​ಯತ್ತ ಧಾವಿ​ಸ​ದಂತೆ ತಡೆ​ಯುವ ಕಾರ್ಯ​ತಂತ್ರ​ವನ್ನು ಹೆಣೆ​ಯುವ ಪ್ರಯತ್ನ ಉಭಯ ಪಕ್ಷ​ಗಳ ನಾಯ​ಕ​ರಿಂದ ನಡೆ​ಯ​ಲಿ​ದೆ ಎಂದು ಮೂಲ​ಗಳು ತಿಳಿ​ಸಿ​ವೆ. ಇದೇ ವೇಳೆ ನಿಗಮ ಮಂಡಳಿ ಅಧ್ಯಕ್ಷರ ನೇಮ​ಕದ ಬಗ್ಗೆಯೂ ಸಭೆ ತೀರ್ಮಾನ ಕೈಗೊ​ಳ್ಳಬೇ​ಕಿದೆ.

ಒಂದು ವೇಳೆ ಈ ಸಭೆ​ಯಲ್ಲಿ ಸಚಿವ ಸಂಪುಟ ವಿಸ್ತ​ರಣೆ ಮಾಡುವ ನಿರ್ಧಾ​ರ​ವನ್ನು ಕೈಗೊಂಡರೆ ಅನಂತ​ರದ ಬೆಳ​ವ​ಣಿ​ಗೆ​ಗಳು ಅತ್ಯಂತ ತ್ವರಿ​ತ​ವಾಗಿ ನಡೆ​ಯ​ಬೇ​ಕಾದ ಅಗ​ತ್ಯ​ವಿದೆ. ಉಭಯ ಪಕ್ಷ​ಗಳ ನಾಯ​ಕರು ಸಂಪುಟ ವಿಸ್ತ​ರ​ಣೆ ಮಾಡು​ವುದೇ ಸೂಕ್ತ ಎಂದು ನಿರ್ಧ​ರಿ​ಸಿದ ನಂತರ ಕಾಂಗ್ರೆಸ್‌ ನಾಯ​ಕರು ತಮ್ಮ ಹೈಕ​ಮಾಂಡನ್ನು ಇದಕ್ಕೆ ಒಪ್ಪಿ​ಸ​ಬೇ​ಕಿದೆ. ಈಗಾಗಲೇ ರಾಜ್ಯ ನಾಯ​ಕರು ಹೈಕ​ಮಾಂಡ್‌ ವರಿ​ಷ್ಠರ ಭೇಟಿಗೆ ಸಮಯ ಕೇಳಿ​ದ್ದಾರೆ. ಆದರೆ, ಮಂಗ​ಳ​ವಾರ ತಡ​ರಾ​ತ್ರಿ​ಯ​ವ​ರೆಗೂ ಹೈಕ​ಮಾಂಡ್‌​ನಿಂದ ಈ ಕುರಿತು ರಾಜ್ಯ ನಾಯ​ಕ​ರಿಗೆ ಯಾವುದೇ ಸೂಚನೆ ಬಂದಿ​ರ​ಲಿಲ್ಲ.

ಆದರೆ, ಸಂಪುಟ ವಿಸ್ತ​ರ​ಣೆ​ಯಾ​ಗಲು ಡಿ.8ರೊಳಗೆ ರಾಜ್ಯ ನಾಯ​ಕರು ದೆಹ​ಲಿಗೆ ತೆರಳಿ ಹೈಕ​ಮಾಂಡ್‌ ವರಿ​ಷ್ಠ​ರನ್ನು ಭೇಟಿ ಮಾಡಿ ಒಪ್ಪಿಗೆ ಪಡೆ​ಯ​ಬೇ​ಕಿದೆ. ಏಕೆಂದರೆ, ಡಿ.8ರಂದು ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವರು ಪಾಲ್ಗೊ​ಳ್ಳು​ವಿ​ಕೆ​ಯಲ್ಲಿ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ಸಭೆ ನಡೆ​ಯ​ಲಿದೆ. ಒಂದು ವೇಳೆ ಹೈಕ​ಮಾಂಡ್‌ ಕೂಡ ಒಪ್ಪಿಗೆ ನೀಡಿ​ದರೆ, ಆಗ ಡಿ.8ರ ಬೆಳಗ್ಗೆ ಅಥವಾ ಡಿ.9ರಂದು ಹೊಸ ಸಚಿ​ವ​ರ ಪ್ರಮಾಣ ವಚನ ನಡೆ​ಸ​ಬೇ​ಕಾ​ಗು​ತ್ತದೆ.

ಕೆಪಿ​ಎ​ಸ್‌ಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಚರ್ಚೆ:

ಒಂದು ಮೂಲದ ಪ್ರಕಾರ ಡಿ.10ರಂದು ವಿಧಾನ ಮಂಡಲ ಅಧಿ​ವೇ​ಶನ (ಅಂದೇ ಅಧಿ​ವೇ​ಶನ ಆರಂಭ​ಗೊ​ಳ್ಳ​ಲಿ​ದೆ)ವನ್ನು ಸಂತಾಪ ಸಲ್ಲಿಕೆ ಪ್ರಸ್ತಾ​ಪದ ನಂತರ ಮುಂದೂಡಿ, ಸಂಜೆ ವೇಳೆಗೆ ವಿಮಾ​ನ​ದಲ್ಲಿ ಬೆಂಗ​ಳೂ​ರಿಗೆ ಬಂದು ಪ್ರಮಾಣ ವಚನ ಸ್ವೀಕ​ರಿ​ಸುವ ಸಾಧ್ಯ​ತೆ​ಯನ್ನು ಕಾಂಗ್ರೆಸ್‌ ನಾಯ​ಕರು ಪರಿ​ಶೀ​ಲಿ​ಸು​ತ್ತಿ​ದ್ದಾರೆ. ಆದರೆ, ಇದ​ಕ್ಕೂ ಮೊದಲು ಸಂಪುಟ ವಿಸ್ತ​ರಣೆ ಮಾಡ​ಬೇಕೋ ಅಥವಾ ಬೇಡವೋ ಎಂಬುದು ನಿರ್ಧಾ​ರ​ವಾ​ಗ​ಬೇ​ಕು.

ಸಮ​ನ್ವಯ ಸಮಿತಿ ಸಭೆ​ಯಲ್ಲಿ ಸಂಪುಟ ವಿಸ್ತ​ರಣೆ, ನಿಗಮ ಮಂಡಳಿ ವಿಚಾರ ಮಾತ್ರ​ವ​ಲ್ಲದೆ, ರಾಜ್ಯ ಸರ್ಕಾ​ರವು ಕಾಂಗ್ರೆಸ್‌ ಪ್ರಣಾಳಿ​ಕೆಯ ಅಂಶ​ಗ​ಳ ಅನುಷ್ಠಾ​ನದ ಬಗ್ಗೆ ನಿರ್ಲಕ್ಷ್ಯ ತೋರು​ತ್ತಿ​ರುವ ಬಗ್ಗೆಯೂ ಸಭೆ​ಯಲ್ಲಿ ಚರ್ಚೆ​ಯಾ​ಗ​ಲಿದೆ ಎನ್ನ​ಲಾ​ಗಿದೆ. ಪ್ರಮುಖ ಹುದ್ದೆ​ಗಳ ನೇಮ​ಕಾತಿಯ ವೇಳೆ ಕಾಂಗ್ರೆ​ಸ್‌ನ ಅಭಿ​ಪ್ರಾ​ಯ​ವನ್ನು ಪರಿ​ಗ​ಣಿ​ಸದ ಧೋರ​ಣೆ​ಯನ್ನು ಕಾಂಗ್ರೆಸ್‌ ಪ್ರಸ್ತಾ​ಪಿ​ಸ​ಲಿದೆ. ಮುಖ್ಯ​ವಾಗಿ ಶೀಘ್ರ ತೆರ​ವಾ​ಗ​ಲಿ​ರುವ ಕೆಪಿ​ಎ​ಸ್‌ಸಿ ಅಧ್ಯಕ್ಷ ಹುದ್ದೆ ನೇಮ​ಕಾತಿ ವೇಳೆ ಏಕ​ಪ​ಕ್ಷೀ​ಯ​ವಾಗಿ ತೀರ್ಮಾನ ತೆಗೆ​ದು​ಕೊ​ಳ್ಳ​ದಂತೆ ಕಾಂಗ್ರೆಸ್‌ ನಾಯ​ಕರು ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಅವರ ಮೇಲೆ ಒತ್ತ​ಡ​ ಹೇರ​ಲಿ​ದ್ದಾರೆ ಎಂದು ಮೂಲ​ಗಳು ತಿಳಿ​ಸಿ​ವೆ.

ಮೊದಲು ಕಾಂಗ್ರೆಸ್‌ ನಾಯ​ಕರ ಸಭೆ

ಸಮ​ನ್ವಯ ಸಮಿತಿ ಸಭೆ​ಯಲ್ಲಿ ಚರ್ಚೆಸ​ಬೇ​ಕಾದ ವಿಚಾ​ರ​ಗಳು ಹಾಗೂ ಈ ವಿಚಾ​ರ​ಗಳ ಬಗ್ಗೆ ಪಕ್ಷದ ನಿಲುವು ಏನಾ​ಗಿ​ರ​ಬೇಕು ಎಂಬ​ ಬ​ಗ್ಗೆ ತೀ​ರ್ಮಾ​ನಿ​ಸಲು ಈ ಸಭೆಗೂ ಮುನ್ನ ಕಾಂಗ್ರೆಸ್‌ ಹಿರಿಯ ನಾಯ​ಕರ ಸಭೆ ಬುಧ​ವಾರ ನಡೆ​ಯ​ಲಿ​ದೆ.

ರಾಜ್ಯ ಉಸ್ತು​ವಾರಿ ಕೆ.ಸಿ. ವೇಣು​ಗೋ​ಪಾಲ್‌, ಸಮ​ನ್ವಯ ಸಮಿತಿ ಅಧ್ಯಕ್ಷ ಸಿದ್ದ​ರಾ​ಮಯ್ಯ, ಹಿರಿಯ ಮುಖಂಡ​ರಾದ ಮಲ್ಲಿ​ಕಾ​ರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್‌. ಮುನಿ​ಯಪ್ಪ, ಆಸ್ಕ​ರ್‌ ​ಫ​ರ್ನಾಂಡಿಸ್‌, ಬಿ.ಕೆ.​ಹ​ರಿ​ಪ್ರ​ಸಾದ್‌, ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌, ಕಾರ್ಯಾ​ಧ್ಯಕ್ಷ ಈಶ್ವರ್‌ ಖಂಡ್ರೆ, ಉಪ ಮುಖ್ಯ​ಮಂತ್ರಿ ಡಾ.ಜಿ. ಪರ​ಮೇ​ಶ್ವರ್‌, ಸಚಿ​ವ​ರಾದ ಡಿ.ಕೆ.ಶಿವ​ಕು​ಮಾರ್‌, ಕೆ.ಜೆ.ಜಾಜ್‌ರ್‍, ಮಾಜಿ ಸಚಿ​ವ​ರಾದ ರೋಷ​ನ್‌​ಬೇಗ್‌ ಸೇರಿ​ದಂತೆ 16 ಮಂದಿ ಹಿರಿಯ ನಾಯ​ಕರು ಈ ಸಭೆ​ಯಲ್ಲಿ ಪಾಲ್ಗೊ​ಳ್ಳು​ವರು ಎಂದು ಮೂಲ​ಗಳು ತಿಳಿ​ಸಿ​ವೆ.

Follow Us:
Download App:
  • android
  • ios