ಬೆಂಗಳೂರು[ಜೂ. 09]  ಸಮಸ್ಯೆ ಹೇಳಿಕೊಳ್ಳಲು ಬಂದ ಸಾರ್ವಜನಿಕರ ವಿರುದ್ಧ ಸಚಿವ ಡಿ.ಸಿ.ತಮ್ಮಣ್ಣ ಹರಿಹಾಯ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಚಾರ ಗಂಭೀರವಾಗಿ ಪರಿಗಣಿಸಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಚಿವರಿಗೆ ಬುದ್ಧಿಮಾತು ಹೇಳಿದ್ದಾರೆ.

ಭಾನುವಾರ ಟ್ವೀಟ್ ಮಾಡಿರುವ ಸಿಎಂ  'ನಾವೆಲ್ಲರೂ ಪಕ್ಷತೀತವಾಗಿ ಜನರ ರಾಜಕೀಯ ಒಲವನ್ನು ಪರಿಗಣಿಸದೆ ಒಟ್ಟಾಗಿ ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ' ಎಂದಿದ್ದಾರೆ.

ತಮ್ಮಣ್ಣ ನಡೆ ಖಂಡಿಸಿ ಎದ್ದಿದ್ದ ವಿವಾದವನ್ನು ಈ ಮೂಲಕ ಸಿಎಂ ತಣ್ಣಗಾಗಿಸಲು ಮುಂದಾಗಿದ್ದಾರೆ.