ಸಿಎಂ ಕುಮಾರಸ್ವಾಮಿ ಆರೋಗ್ಯ ಹದಗೆಡಲು ಮಾಧ್ಯಮಗಳೆ ಕಾರಣವಂತೆ, ಅದರಲ್ಲೂ ಪ್ರಮುಖವಾಗಿ ಟಿವಿ ಮಾಧ್ಯಮಗಳೆ ಕಾರಣವಂತೆ. ಸಿಎಂ ಇದೇ ವಿಚಾರದಲ್ಲಿ ಮಾಧ್ಯಮಗಳೆ ಮೇಲೆಯೆ ಹರಿಹಾಯ್ದಿದ್ದಾರೆ.

ಮಂಡ್ಯ[ಅ.26] ಮತ್ತೆ ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಮಾಧ್ಯಮಗಳು ನನ್ನ ವಿರುದ್ಧ ಜನರನ್ನು ಎತ್ತಿ ಕಟ್ಟುತ್ತಿವೆ ಎಂದು ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನನ್ನನ್ನ ಯಾರೂ ಹಂಗಿನಲ್ಲಿ ಇಟ್ಟುಕೊಳ್ಳಲು ಆಗಲ್ಲ, ನಾನು ಏನೇ ಮಾತಾಡಿದ್ರು ತಿರುಚಿ ಬರೆಯುತ್ತಾರೆ.ಎಲ್ಲರ ಬಗ್ಗೆ ಹೇಳಲ್ಲ, ಬೆಂಗಳೂರಿನ ಕೆಲವು ಮಾಧ್ಯಮಗಳು ಎಂದು ಕಿಡಿಕಾರಿದರು. ನಾನು ಟಿವಿ ಚಾನೆಲ್ ಗಳಿಗೆ ಹೆದರಲ್ಲ. ಹೆದರಿಸೋಕೂ ಅವರಿಂದ ಸಾಧ್ಯವಿಲ್ಲ. ನಿಮ್ಮ ಬಂಡವಾಳ ಏನಿದೆ ಅನ್ನೋದನ್ನೂ ತೆಗೆಯಬೇಕಾಗುತ್ತೆ. ಪತ್ರಿಕಾ ಸ್ವಾತಂತ್ರ್ಯಕ್ಕೆ ನಾನು ಚ್ಯುತಿ ತರಲ್ಲ. ಬರೆಯಬೇಕಿದ್ರೆ ಸತ್ಯ ಬರೆಯಿರಿ. ನನ್ನ ಜೀವನದ ಜೊತೆ ಚೆಲ್ಲಾಟವಾಡ್ತಿದ್ದಾರೆ ಎಂದು ನೊಂದು ನುಡಿದರು.

ನಿಮ್ಮ ಮನೆ ಟಿವಿ ತೆಗೆದು ಹಾಕಿ ಅಂತಾ ಕೆಲವು ಡಾಕ್ಟರ್ ನನಗೆ ಸಲಹೆ ನೀಡಿದ್ದಾರೆ. ನಿಮಗೆ ಇಷ್ಟ ಬಂದಂತೆ ಬರೆಯಬೇಡಿ. ನಾನು ಭಂಡ ರಾಜಕಾರಣಿ ಅಲ್ಲ. ಮೊನ್ನೆ ನಾನು ದೇವರ ದಯೆಯಿಂದ ಬದುಕಿ ಬಂದಿದ್ದೇನೆ. ಜನರನ್ನು ದಿಕ್ಕು ತಪ್ಪಿಸಬೇಡಿ. ನನ್ನ ಭಾವನಾತ್ಮಕ ನಡವಳಿಕೆ ಜೊತೆ ಚೆಲ್ಲಾಟವಾಡಬೇಡಿ. ನನ್ನ ಆರೋಗ್ಯ ಕೆಡಲು ಕೆಲವು ಚಾನೆಲ್ ಗಳು ಕಾರಣ. ಇದು ಮುಂದುವರಿದರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.