ಬೆಂಗಳೂರು[ಜ.17]  ಕೋಲ್ಕತಾದಲ್ಲಿ ಶನಿವಾರ ನಡೆಯುವ ತೃಣಮೂಲ ಕಾಂಗ್ರೆಸ್ ಪಕ್ಷದ ಸಾರ್ವಜನಿಕ  ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ತುಮಕೂರಿನಲ್ಲಿ ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಸಿದ ಬಳಿಕ  ಸಂಜೆ ಸಿಎಂ ಕುಮಾರಸ್ವಾಮಿ ಬೆಂಗಳೂರಿನಿಂದ ಕೋಲ್ಕತಾ ಗೆ ಪ್ರಯಾಣ ಬೆಳಸಲಿದ್ದಾರೆ.  ಸಂಜೆ 6 ಗಂಟೆಗೆ ವಿಶೇಷ ವಿಮಾನದ ಮೂಲಕ ಕೋಲ್ಕತಾ ಗೆ ಪ್ರಯಾಣ ಬೆಳಸಲಿದ್ದಾರೆ. ಬಳಿಕ ಶನಿವಾರ ಕೋಲ್ಕತಾದಿಂದ ನೇರವಾಗಿ ಮೈಸೂರಿಗೆ ಸಿಎಂ ಆಗಮಿಸಲಿದ್ದಾರೆ.

ಆಪರೇಷನ್ ಕಮಲ: ಸ್ವಾಮಿ, ಅಯ್ಯನ ರಹಸ್ಯ ಆಟಕ್ಕೆ ದಿಕ್ಕು ತಪ್ಪಿದ ಬಿಜೆಪಿ!

ಲೋಕಸಭೆ ಚುನಾವಣೆ ಎದುರಾಗುತ್ತಿರುವ ಹೊತ್ತಿನಲ್ಲಿ ದೇಶದ ವಿವಿಧ ಪಕ್ಷಗಳು ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ವಿರುದ್ಧ ಒಂದಾಗುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಹ ಪಾದಯಾತ್ರೆ ಹಮ್ಮಿಕೊಂಡಿದ್ದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬದಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಚಾಲನೆ ನೀಡಲಿದ್ದಾರೆ.