ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದೆ. ಆದರೆ, ಸಚಿವ ಸಂಪುಟ ಸೇರುವ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿದೆ. ಹಾಗಾಗಿ ಯಾರಿಗೆ ಸಿಗುತ್ತೋ ಯಾರಿಗಿಲ್ಲೋ ಎನ್ನುವ ಕುತೂಹಲ ಮೂಡಿಸಿದೆ. ನಮಗೆ ಸಿಕ್ಕ ಪ್ರಾಥಮಿಕ ವರದಿಗಳ ಪ್ರಕಾರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಸಂಭವನೀಯರ ಪಟ್ಟಿ ಈ ಕೆಳಗಿನಂತಿದೆ.

ಬೆಂಗಳೂರು, (ಅ.1): ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದೆ. ವಿಧಾನ ಪರಿಷತ್ ಚುನಾವಣೆ ಬೆನ್ನಲ್ಲೇ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಸಂಪುಟ ವಿಸ್ತರಣೆಯಾಗೋದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಖಚಿತಪಡಿಸಿದ್ದು, ಇದೇ ಅಕ್ಟೋಬರ್ 10 ಅಥವಾ 12ರಂದು ಒಂದೇ ಹಂತದಲ್ಲಿ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದ್ದಾರೆ.

ಕೊನೆಗೂ ರಾಜ್ಯ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್

ಕಾಂಗ್ರೆಸ್ ನಲ್ಲಿ 6 ಹಾಗೂ ಜೆಡಿಎಸ್ 1 ಒಟ್ಟು 7 ಸಚಿವ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತದೆ. ಆದರೆ, ಸಚಿವ ಸಂಪುಟ ಸೇರುವ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿದೆ. ಹಾಗಾಗಿ ಯಾರಿಗೆ ಸಿಗುತ್ತೋ ಯಾರಿಗಿಲ್ಲೋ ಎನ್ನುವ ಕುತೂಹಲ ಮೂಡಿಸಿದೆ.

ನಮಗೆ ಸಿಕ್ಕ ಪ್ರಾಥಮಿಕ ವರದಿಗಳ ಪ್ರಕಾರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಸಂಭವನೀಯರ ಪಟ್ಟಿ ಈ ಕೆಳಗಿನಂತಿದೆ.

* ರಾಮಲಿಂಗಾರೆಡ್ಡಿ- ಬಿಟಿಎಂ ಲೇಔಟ್ ಶಾಸಕ

* ಎಂ.ಟಿ.ಬಿ.ನಾಗರಾಜ್ - ಹೊಸಕೋಟೆ ಶಾಸಕ

* ಅಮರೇಗೌಡ ಭಯ್ಯಾಪುರ - ಕುಷ್ಠಗಿ ಶಾಸಕ

* ನಾಗೇಂದ್ರ - ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ

* ಆನಂದ ಸಿಂಗ್ - ಹೊಸಪೇಟೆ- ವಿಜಯನಗರ ಶಾಸಕ

* ಎಂ.ಬಿ.ಪಾಟೀಲ್ - ಬಬಲೇಶ್ವರ್ ಶಾಸಕ

* ಡಾ. ಸುಧಾಕರ್ - ಚಿಕ್ಕಬಳ್ಳಾಪುರ ಶಾಸಕ

* ನಾಗೇಶ್ - ಪಕ್ಷೇತರ ಶಾಸಕ

* ಶಿವರಾಮ್ ಹೆಬ್ಬಾರ್ - ಯಲ್ಲಾಪುರ ಶಾಸಕ

* ಬಿ.ಕೆ ಸಂಗಮೇಶ್ವರ್ - ಭದ್ರಾವತಿ ಶಾಸಕ