ಜೋತಿಷಿಗಳ ಸಲಹೆ ಮೇರೆಗೆ ಎಚ್.ಡಿ ರೇವಣ್ಣ ಸಮಯ ಬದಲಿಸಲು ಪಟ್ಟು ಹಿಡಿದಿದ್ದ ಹಿನ್ನಲೆಯಲ್ಲಿ ಸಚಿವರ ಪ್ರಮಾಣವಚನ ನಾಳೆ ಮಧ್ಯಾಹ್ನ ಎರಡು ಗಂಟೆಯ ಬದಲಾಗಿ 2.12ಕ್ಕೆ ನಿಗದಿಯಾಗಿದೆ ಎನ್ನಲಾಗಿದೆ. ಜೋತಿಷಿಗಳೊಂದಿಗೆ ಚರ್ಚಿಸಿ ಎಚ್.ಡಿ ರೇವಣ್ಣ ಸಮಯ ಬದಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. 

ಬೆಂಗಳೂರು[ಜೂ.05]: ನಾಳೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ನೂತನ ಸಚಿವರ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಈ ಮೊದಲು ನಿಗದಿಯಾಗಿದ್ದ ಮಧ್ಯಾಹ್ನ 2 ಗಂಟೆ ಬದಲಾಗಿ ಎರಡು ಗಂಟೆ 12 ನಿಮಿಷಕ್ಕೆ ಪ್ರಮಾಣ ವಚನ ನೆರವೇರಲಿದೆ.
ಜೋತಿಷಿಗಳ ಸಲಹೆ ಮೇರೆಗೆ ಎಚ್.ಡಿ ರೇವಣ್ಣ ಸಮಯ ಬದಲಿಸಲು ಪಟ್ಟು ಹಿಡಿದಿದ್ದ ಹಿನ್ನಲೆಯಲ್ಲಿ ಸಚಿವರ ಪ್ರಮಾಣವಚನ ನಾಳೆ ಮಧ್ಯಾಹ್ನ ಎರಡು ಗಂಟೆಯ ಬದಲಾಗಿ 2.12ಕ್ಕೆ ನಿಗದಿಯಾಗಿದೆ ಎನ್ನಲಾಗಿದೆ. ಜೋತಿಷಿಗಳೊಂದಿಗೆ ಚರ್ಚಿಸಿ ಎಚ್.ಡಿ ರೇವಣ್ಣ ಸಮಯ ಬದಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. 
ಸುಮಾರು 2 ವಾರಗಳ ಕಾಲ ನಡೆದ ಸಚಿವ ಸಂಪುಟ ಬಿಕ್ಕಟ್ಟು ಕೊನೆಗೂ ಬಗೆಹರಿದಂತಾಗಿದ್ದು, ನಾಳೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ ಯಾರಿಗೆ ಯಾವ ಖಾತೆ ಎನ್ನುವ ಕುತೂಹಲಕ್ಕೆ ಇನ್ನೂ ತೆರೆಬಿದ್ದಿಲ್ಲ.