ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಸರಕಾರದ ಅಭ್ಯರ್ಥಿ ಶಿವರಾಮೇಗೌಡರ ಪರವಾಗಿ ಸಿಎಂ ಕುಮಾರಸ್ವಾಮಿ ಮತಯಾಚನೆ ಮಾಡಿದರು. ಈ ವೇಳೆ ಭಾವನಾತ್ಮಕವಾಗಿ ಮಾತನಾಡಿದರು. ಆದರೆ ಭಾಷಣ ಆರಂಭಕ್ಕೂ ಮುನ್ನ ಕುಡುಕನೊಬ್ಬನ ಆಟಾಟೋಪ ನೋಡುವಂತಿತ್ತು.

ಮಂಡ್ಯ[ಅ.26]  ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಷಣ ಆರಂಭ ಮಾಡುತ್ತಲೆ ಕಂಠಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ ಜೋರಾಗಿ ಮಾತನಾಡಲು ಆರಂಭಿಸಿದ್ದಾನೆ. ತಕ್ಷಣ ಪೊಲೀಸರು ಆತನನ್ನು ನಿಯಂತ್ರಣಕ್ಕೆ ತರಲು ಮುಂದಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಇದೆಲ್ಲವನ್ನು ನೋಡುತ್ತಿದ್ದ ಕುಮಾರಸ್ವಾಮಿ ‘ಬಿಡ್ರಿ ಪಾಪಾ.. ಅವರು ನಮ್ಮ ಅಭಿಮಾನಿಗಳು... ಅಂಥ ಹೇಳಿ ಮಾತು ಮುಂದುವರಿಸಿದ್ದಾರೆ.

ಐದು ತಿಂಗಳು ಸರ್ಕಾರದ ಅವಧಿ ಮುಗಿದಿದೆ. ಕಬ್ಬು ಮತ್ತು ರೇಷ್ಮೆ ಬೆಳೆಗಾರರು ನಮ್ಮ ಸಂಕಷ್ಟ ದ ಬಗ್ಗೆ ಮಾತಾಡಿ ಅಂತಾ ಕೇಳ್ತಿದಾರೆ. ಈ ಸರ್ಕಾರದಲ್ಲಿ ಮಾವು ಬೆಳೆಗೆ ಬೆಂಬಲ ಬೆಲೆ ಕೊಡುವ ಬಗ್ಗೆ ತೀರ್ಮಾನ ಮಾಡಿದ್ದೆವು. ರೇಷ್ಮೆ ಬೆಳೆ ಕುಸಿದಾಗಲೂ ಬೆಂಬಲ ಬೆಲೆ ಕೊಡುವ ನಿರ್ಧಾರ ಮಾಡಿದ್ದೇವೆ. ಯಾವುದೇ ರೇಷ್ಮೆ ಬೆಳೆಗಾರರು ಆತಂಕಕ್ಕೆ ಒಳಗಾಗಬೇಡಿ. ನಿಮಗೆ ನೋವು ಕೊಟ್ಟು ಆಡಳಿತ ಮಾಡಲ್ಲ ನಾನು ಎಂದು ಕುಮಾರಸ್ವಾಮಿ ತಮ್ಮ ಭಾಷಣದ ಉದ್ದಕ್ಕೂ ಭಾವನಾತ್ಮಕವಾಗಿಯೇ ಮಾತನಾಡಿದರು.