ಕರ್ನಾಟಕ ಬಂದ್ ದಿನಾಂಕ ಬದಲು

Karnataka Bundh preponed
Highlights

ಜ.25ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಪ್ರಧಾನಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ. ಬಂದ್'ಗೆ ಚಿತ್ರರಂಗ ಕೂಡ ಸಂಪುರ್ಣ ಬೆಂಬ ನೀಡಲಿದೆ. ಅಂದು ಯಾವುದೇ ಚಿತ್ರ ಪ್ರದರ್ಶನ ಹಾಗೂ ಚಿತ್ರೀಕರಣ ಇರುವುದಿಲ್ಲ'

ಬೆಂಗಳೂರು(ಜ.11): ಕನ್ನಡಪರ ಸಂಘಟನೆಗಳು ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ರಾಜ್ಯ ಬಂದ್'ಗೆ ಕರೆ ನೀಡಿದ್ದ ದಿನಾಂಕವನ್ನು ಜ.27ರ ಬದಲಾಗಿ ಜ.25ಕ್ಕೆ ಬಂದ್ ಹಮ್ಮಿಕೊಳ್ಳಲು ನಿರ್ಧರಿಸಿವೆ.

ಸಾಲು ಸಾಲು ರಜೆಯ ಹಿನ್ನಲೆಯಲ್ಲಿ ಬಂದ್ ದಿನಾಂಕವನ್ನು ಬದಲಾವಣೆ ಮಾಡಿರುವುದಾಗಿ ಕನ್ನಡಪರ ಸಂಘಟನೆಗಳ ಒಕ್ಕೂಟಗಳ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.  

ಜ.25ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಪ್ರಧಾನಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ. ಬಂದ್'ಗೆ ಚಿತ್ರರಂಗ ಕೂಡ ಸಂಪುರ್ಣ ಬೆಂಬಲ ನೀಡಲಿದೆ. ಅಂದು ಯಾವುದೇ ಚಿತ್ರ ಪ್ರದರ್ಶನ ಹಾಗೂ ಚಿತ್ರೀಕರಣ ಇರುವುದಿಲ್ಲ' ಎಂದು ಹೇಳಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ್ ಮಾತನಾಡಿ, ಕರ್ನಾಟಕ ಮೋದಿಯವರ ಗುಲಾಮರಲ್ಲಾ. ಮಹದಾಯಿ ಮತ್ತು ಕಳಸಾ ಬಂಡೂರಿಯನ್ನು ಮೋದಿಯವರು ಕಡೆಗಣಿಸಿದ್ದಾರೆ. ಪ್ರಧಾನ ಮಂತ್ರಿಯವರು  ಗೋವಾ ಸರ್ಕಾರವನ್ನು ವಜಾ ಮಾಡಿ ನಮಗೆ ನೀರು ಕೋಡಲಿ. ಮೋದಿ ರಾಜ್ಯಕ್ಕೆ ಬರುವ ದಿನ ಪ್ರಧಾನಿ ವಿರುದ್ಧ ತೀವ್ರ ಹೋರಾಟ ಮಾಡುತ್ತೇವೆ' ಎಂದು ತಿಳಿಸಿದರು.

loader